ಪ್ರೊಕಬಡ್ಡಿ ಲೀಗ್: ತೆಲುಗು ಟೈಟನ್ಸ್‌ಗೆ 2ನೆ ಸ್ಥಾನ
Update: 2016-07-19 23:22 IST
ಕೋಲ್ಕತಾ, ಜು.19: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಲೀಗ್ ಪಂದ್ಯಗಳಲ್ಲಿ ತೆಲುಗು ಟೈಟನ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಜಯ ಸಾಧಿಸಿವೆ.
41ನೆ ಪಂದ್ಯದಲ್ಲಿ ತೆಲುಗು ತಂಡ ದಬಾಂಗ್ ಡೆಲ್ಲಿಯನ್ನು 36-28 ಅಂತರದಿಂದ ಮಣಿಸಿತು. 11ನೆ ಪಂದ್ಯದಲ್ಲಿ 6ನೆ ಗೆಲುವು ಸಾಧಿಸಿ 37 ಅಂಕ ಪಡೆದ ತೆಲುಗು ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿತು. ರಾಹುಲ್ ಚೌಧರಿ ಮತ್ತೊಮ್ಮೆ ಪಂದ್ಯದ ಉತ್ತಮ ರೈಡರ್ ಪ್ರಶಸ್ತಿಯನ್ನು ಪಡೆದರು.
ಸೋಲಿನ ಸುಳಿಯಿಂದ ಹೊರಬಂದ ಬುಲ್ಸ್:
42ನೆ ಪಂದ್ಯದಲ್ಲಿ ಆತಿಥೇಯ ಬಂಗಾಲ ವಾರಿಯರ್ಸ್ ತಂಡವನ್ನು ಕೇವಲ 2 ಅಂಕದಿಂದ ಮಣಿಸಿರುವ ಬೆಂಗಳೂರು ಬುಲ್ಸ್ ಸತತ ಸೋಲಿನ ಸುಳಿಯಿಂದ ಹೊರ ಬಂದಿದೆ. 27-25 ಅಂಕಗಳ ಅಂತರದಿಂದ ಜಯ ಸಾಧಿಸಿರುವ ಬೆಂಗಳೂರು ತಂಡ ತನ್ನ 12ನೆ ಪಂದ್ಯದಲ್ಲಿ 4ನೆ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 6ನೆ ಸ್ಥಾನ ಪಡೆದಿದೆ. 12ರಲ್ಲಿ 8ನೆ ಸೋಲು ಕಂಡಿರುವ ಬಂಗಾಲ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ.