×
Ad

ಭಾರತಕ್ಕೆ ಸ್ಪೇನ್ ಎದುರಾಳಿ

Update: 2016-07-19 23:24 IST

ಲಂಡನ್, ಜು.19: ಭಾರತ ತಂಡ ತವರು ನೆಲದಲ್ಲಿ ನಡೆಯಲಿರುವ ಡೇವಿಸ್ ಕಪ್‌ನ ವಿಶ್ವ ಗ್ರೂಪ್ ಪ್ಲೇ-ಆಫ್ ಸುತ್ತಿನಲ್ಲಿ ಯುರೋಪ್‌ನ ಬಲಿಷ್ಠ ತಂಡ ಸ್ಪೇನ್‌ನ್ನು ಮುಖಾಮುಖಿಯಾಗಲಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್) ಮಂಗಳವಾರ ಡ್ರಾ ಪ್ರಕ್ರಿಯೆ ವೇಳೆ ಘೋಷಣೆ ಮಾಡಿದೆ.

ಭಾರತ ತಂಡ ಏಷ್ಯಾ-ಒಶಿಯಾನಿಯ ಗ್ರೂಪ್-1ರಲ್ಲಿ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿದರೆ, ಯುರೋಪ್-ಆಫ್ರಿಕ ವಲಯ ಪಂದ್ಯದಲ್ಲಿ ಸ್ಪೇನ್ ತಂಡ ರೊಮಾನಿಯವನ್ನು ಮಣಿಸಿ ವಿಶ್ವಗ್ರೂಪ್‌ಗೆ ತೇರ್ಗಡೆಯಾಗಿದ್ದವು.

ಭಾರತ ಹಾಗೂ ಸ್ಪೇನ್ ಡೇವಿಸ್ ಕಪ್‌ನಲ್ಲಿ ಮೂರು ಬಾರಿ ಸೆಣಸಾಡಿವೆ. ಈ ಪೈಕಿ ಸ್ಪೇನ್ 2 ಪಂದ್ಯ ಜಯಿಸಿದೆ. 1965ರಲ್ಲಿ ಕೊನೆಯ ಬಾರಿ ಸ್ಪೇನ್ ವಿರುದ್ಧ ಆಡಿದ್ದ ಭಾರತ 2-3 ಅಂತರದಿಂದ ಸೋತಿತ್ತು.

 ಸೆ.16 ರಿಂದ 18ರ ತನಕ ಸ್ವದೇಶದಲ್ಲಿ ನಡೆಯಲಿರುವ ವಿಶ್ವ ಗ್ರೂಪ್ ಪ್ಲೇ-ಆಪ್ ಸುತ್ತಿನಲ್ಲಿ ಭಾರತ ವಿಶ್ವದ ನಂ.15ನೆ ಆಟಗಾರ ರಾಬರ್ಟ್ ಬೌಟಿಸ್ಟಾ ನೇತೃತ್ವದ ಸ್ಪೇನ್ ತಂಡದ ಸವಾಲು ಎದುರಿಸಲಿದೆ. ಸ್ಪೇನ್ ತಂಡದಲ್ಲಿ ಫೆಲಿಸಿಯಾನೊ ಲೊಪೆಝ್(ವಿಶ್ವದ ನಂ.21), ಪಾಬ್ಲೊ ಕಾರ್ರೆನೊ(ವಿಶ್ವದ ನಂ.56) ಹಾಗೂ ಮಾರ್ಕ್ ಲೊಪೆಝ್(ವಿಶ್ವದ ನಂ.19) ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News