ಭಾರತ ತಂಡದೊಂದಿಗೆ ಬೆರೆತ ವಿಂಡೀಸ್ ದಂತಕತೆ ಸರ್‌ವಿವಿಯನ್ ರಿಚರ್ಡ್ಸ್
ಆ್ಯಂಟಿಗುವಾ, ಜು.19: ವೆಸ್ಟ್‌ಇಂಡೀಸ್ ದಂತಕತೆ ಸರ್‌ವಿವಿಯನ್ ರಿಚರ್ಡ್ಸ್ ಟೀಮ್ ಇಂಡಿಯಾ ಬೀಡುಬಿಟ್ಟಿದ್ದ ಹೊಟೇಲ್‌ಗೆ ಭೇಟಿ ನೀಡಿ ಸಲಹೆ-ಸೂಚನೆ ನೀಡಿದ್ದಾರೆ.
‘‘ಪ್ರಥಮ ಟೆಸ್ಟ್ ಪಂದ್ಯ ಆರಂಭಕ್ಕೆ ಮೊದಲು ವಿಂಡೀಸ್ ದಂತಕತೆ ರಿಚರ್ಡ್ಸ್ ಅವರಿಂದ ವೌಲ್ಯಯುತ ಸಲಹೆ ಸೂಚನೆಯನ್ನು ಸ್ವೀಕರಿಸಿದ್ದೇವೆ’’ಎಂದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜು.21 ರಿಂದ 25ರ ತನಕ ಆ್ಯಂಟಿಗುವಾದ ನಾರ್ಥ್‌ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತೀಯ ಕ್ರಿಕೆಟಿಗರಾದ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮುರಳಿ ವಿಜಯ್ ಹಾಗೂ ಕೆ.ಎಲ್. ರಾಹುಲ್‌ಗೆ ರಿಚರ್ಡ್ಸ್ ಅವರು ಕೆಲವು ಉಪಯುಕ್ತ ಸಲಹೆ ನೀಡಿದರು. ಆ ಬಳಿಕ 62 ರ ಹರೆಯದ ರಿಚರ್ಡ್ಸ್ ಸಂತೋಷದಿಂದ ಆಟಗಾರರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ಸರ್ ವಿವಿರಿಚರ್ಡ್ಸ್ ಅವರೊಂದಿಗೆ ಕಳೆದ ಆ ಕ್ಷಣ ಅತ್ಯಂತ ಸ್ಮರಣೀಯವಾಗಿತ್ತು. ನಾನು ಅವರಿಂದ ಚಿನ್ನದಂತಹ ಮಾತು ಕೇಳಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ರಿಚರ್ಡ್ಸ್ ಅವರು ಕೊಹ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಬಗ್ಗೆ ಯಾವಾಗಲೂ ಶ್ಲಾಘಿಸುತ್ತಿರುತ್ತಾರೆ.
ಗ್ರೇಟ್ ಸರ್‌ವಿವಿ ರಿಚರ್ಡ್ಸ್‌ರೊಂದಿಗೆ ಚರ್ಚೆ ನಡೆಸಿ ತುಂಬಾ ಸಂತೋಷವಾಯಿತು ಎಂದು ಧವನ್ ಟ್ವೀಟ್ ಮಾಡಿದರು.
‘‘ಸರ್ ವಿವಿ ನಮಗೆ ಸಾಕಷ್ಟು ಉಪಯುಕ್ತ ಸಲಹೆ ನೀಡಿದರು’’ ಎಂದು ಭರವಸೆಯ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ.