×
Ad

ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು

Update: 2016-07-19 23:36 IST

ನ್ಯೂಯಾರ್ಕ್, ಜು.19: ಒಲಿಂಪಿಕ್ಸ್‌ಗೆ ತಯಾರಿ ನಡೆಸುವ ಉದ್ದೇಶದಿಂದ ಅಮೆರಿಕ ಪ್ರವಾಸದಲ್ಲಿರುವ ಭಾರತದ ಮಹಿಳಾ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡದ ವಿರುದ್ಧ 2-3 ಅಂತರದಿಂದ ಸೋತಿದೆ.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಪ್ರೀತಿ ದುಬೆ(33ನೆ ನಿಮಿಷ) ಹಾಗೂ ದೀಪಿಕಾ(38ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ವಿಜೇತ ಅಮೆರಿಕದ ಪರ ಕಥ್ಲೀನ್ ಶಾರ್ಕೆ(6ನೆ ನಿ.), ಕಾಟೇಬಾಮ್(31ನೆ ನಿ.) ಹಾಗೂ ಕೆಲ್ಸೆ ಕೊಲೊಜೆಚಿಕ್(48ನೆ ನಿ.) ತಲಾ ಒಂದು ಗೋಲು ಬಾರಿಸಿದ್ದಾರೆ.

ಉಭಯ ತಂಡಗಳು ಎಚ್ಚರಿಕೆಯ ಆಟವಾಡಿದ್ದು, ಸೋಲು ತಪ್ಪಿಸಿಕೊಳ್ಳಲು ಯತ್ನಿಸಿದವು. ಅಮೆರಿಕ 6ನೆ ನಿಮಿಷದಲ್ಲಿ ಮುನ್ನಡೆ ಪಡೆಯಿತು. ಕಾಟೇ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಆದರೆ, 33 ಹಾಗೂ 38ನೆ ನಿಮಿಷದಲ್ಲಿ ಗೋಲು ಬಾರಿಸಿದ ಭಾರತದ ಆಟಗಾರ್ತಿಯರು ಸ್ಕೋರನ್ನು 2-2 ರಿಂದ ಸಮಬಲಗೊಳಿಸಿದರು. ಆದರೆ, ಕೆಲ್ಸೆ 48ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದ್ದಾರೆ.

ಭಾರತ ಜು.21 ರಂದು ಅಮೆರಿಕದ ವಿರುದ್ಧ ಎರಡನೆ ಟೂರ್ ಪಂದ್ಯ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News