ರಾಜ್ಯದಲ್ಲಿ ಆತ್ಮಹತ್ಯೆಗಳಿಗೆ ಪ್ರೇತ ಬಾಧೆ ಕಾರಣ: ಮಧ್ಯಪ್ರದೇಶ ಗೃಹಸಚಿವ!
ಭೋಪಾಲ್,ಜುಲೈ 20: ರಾಜ್ಯದಲ್ಲಿ ನಡೆಯುತ್ತಿರುವ ಆತ್ಮಹತ್ಯೆಯ ಘಟನೆಗಳಿಗೆ ಪ್ರೇತಬಾಧೆ ಕಾರಣವೆಂದು ಗೃಹಸಚಿವರು ತಿಳಿಸುವ ಮೂಲಕ ಮಧ್ಯಪ್ರದೇಶದ ವಿಧಾನಸಭೆಯನ್ನೇ ಚಕಿತಗೊಳಿಸಿದ ಘಟನೆ ವರದಿಯಾಗಿದೆ. ಕಾಂಗ್ರೆಸ್ ಶಾಸಕರಾದ ಶೈಲೇಂದ್ರ ಪಾಟೀಲ್ ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಕುರಿತು ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದರು. ಆದರೆ ಇದಕ್ಕೆ ಪ್ರೇತದ ಹಾವ ಕಾರಣ ಎಂದು ಹೇಳಿ ಗೃಹಸಚಿವರು ಸದನವನ್ನೇ ಚಕಿತಗೊಳಿಸಿದರು ಎಂದು ವರದಿವಿವರಿಸಿದೆ.
ಗೃಹಸಚಿವ ಭೂಪೇಂದ್ರ ಸಿಂಗ್ ರಾಜ್ಯದಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳಿಗೆ ಪ್ರೇತ ಬಾಧೆ ಹಾಗೂಮಂತ್ರವಾದ ಕಾರಣವಾಗಿದೆ ಎಂದು ಸದನದಲ್ಲಿ ಹೇಳಿದಾಗ, ಹಾಗಿದ್ದರೆ ಸರಕಾರ ಪ್ರೇತವನ್ನು ನಂಬುತ್ತಿದೆಯೇ?’ ಎಂದು ಮರು ಪ್ರಶ್ನೆಹಾಕಿ ಗೃಹ ಸಚಿವರನ್ನು ಪ್ರತಿಪಕ್ಷಗಳು ಗೇಲಿ ಮಾಡಿವೆ. ಆದರೆ ಪ್ರತಿಪಕ್ಷಗಳು ಎತ್ತಿದ ಈ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸುವ ಗೋಜಿಗೆಹೋಗಲಿಲ್ಲ ಎನ್ನಲಾಗಿದೆ. ಜನರು ಆತ್ಮಹತ್ಯೆ ಮಾಡಿಕೊಳುತ್ತಿರುವುದು ಪ್ರೇತಬಾಧೆ ಕಾರಣದಿಂದ ಎಂದು ಸರಕಾರದ ನಿಲುವು ಅಲ್ಲ. ಮೃತರಾದ ವ್ಯಕ್ತಿಗಳ ಕುಟುಂಬದವರು ಹೇಳಿದ್ದನ್ನು ಸದನಕ್ಕೆ ತಿಳಿಸುವ ಕೆಲಸವನ್ನು ತಾನು ಮಾಡಿದ್ದೇನೆ ಎಂದು ನಂತರ ಗೃಹಸಚಿವರು ಸದನದಲ್ಲಿ ಸ್ಪಷ್ಟಪಡಿಸಿದರೆಂದು ವರದಿ ತಿಳಿಸಿದೆ. ಆತ್ಮಹತ್ಯೆಯ ಗ್ರಾಮ ಎಂದು ಪರಿಚಿತಗೊಂಡಿರುವ ಮಧ್ಯಪ್ರದೇಶದ ಬಾಡಿಯಲ್ಲಿ ಹೊಸಲೆಕ್ಕಗಳ ಪ್ರಕಾರ ಈವರ್ಷ 350ಮಂದಿಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ವರದಿತಿಳಿಸಿದೆ.