×
Ad

ರಾಹುಲ್ ನಿದ್ದೆ ಮಾಡಿದರೆ, ಮೋದಿ ಮಾಡಿದ್ದು ಧ್ಯಾನವೇ ?

Update: 2016-07-21 17:19 IST

ನವದೆಹಲಿ,ಜು.21 : ಜುಲೈ 20 ರಂದು ಸಂಸತ್ತು ಗುಜರಾತ್ ದಲಿತರ ವಿರುದ್ಧನಡೆದ ದೌರ್ಜನ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿರುವಾಗ ಹಾಗೂ ಗೃಹ ಸಚಿವ ಈ ವಿಚಾರವಾಗಿ ಸರಕಾರದ ಅಭಿಪ್ರಾಯವನ್ನು ಮಂಡಿಸುತ್ತಿದ್ದಾಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆ ಮಾಡುತ್ತಿರುವುದು ಕಂಡು ಬಂದು ಭಾರೀ ಸುದ್ದಿಯಾಗಿತ್ತು.

ಇದರಿಂದ ವಿಚಲಿತರಾಗದೆ ತಕ್ಷಣ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕಿ ರೇಣುಕಾ ಚೌಧುರಿ ‘‘ಇಷ್ಟೊಂದು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವಾಗ ಯಾರಾದರೂ ಹೇಗೆ ನಿದ್ದೆ ಮಾಡಲು ಸಾಧ್ಯ? ಅವರೇನು ನಿದ್ದೆ ಮಾಡುತ್ತಿರಲಿಲ,’’ ಎಂದು ಹೇಳಿದ್ದರು. ತಮ್ಮ ಪಕ್ಷದ ನಾಯಕನನ್ನು ಅವರು ಸಮರ್ಥಿಸಿರುವುದು ಸರಿ. ಆದರೂ ರಾಹುಲ್ ನಿದ್ದೆ ಮಾಡಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ಜೋಕ್ ಮಾಡುವುದನ್ನು ಅವರ ಹೇಳಿಕೆಗೆ ನಿಲ್ಲಿಸಲು ಸಾಧ್ಯವಾಗಿಲ್ಲ.

ಟ್ವಿಟ್ಟರಿಗರಂತೂ ಹಲವಾರು ಹಳೆಯ ರಾಜಕಾರಣಿಗಳು ಸಂಸತ್ತಿನಲ್ಲಿನಿದ್ದೆ ಮಾಡುತ್ತಿರುವ ಫೊಟೋಗಳನ್ನು ಹುಡುಕಿ ಪೋಸ್ಟ್ ಮಾಡಿದ್ದೇ ಮಾಡಿದ್ದು. ಅವರು ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜವುಳಿ ಸಚಿವೆ ಸ್ಮೃತಿ ಇರಾನಿ ಸಂಸತ್ತಿನಲ್ಲಿ ನಿದ್ದೆ ಮಾಡಿದ ಚಿತ್ರಗಳೂ ಇದ್ದವು.

ಇರಾನಿ ಎಚ್‌ಆರ್ ಡಿ ಸಚಿವೆಯಾಗಿದ್ದಾಗ ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಸಂದರ್ಭದಲ್ಲಿನಿದ್ದೆ ಮಾಡುತ್ತಿರುವ ದೃಶ್ಯದ ವೀಡಿಯೋ  ಈ ವರ್ಷದ ಮೇ ತಿಂಗಳಲ್ಲಿ ಮೊದಲು ಬಹಿರಂಗವಾಗಿತ್ತು. ಮೋದಿ ನಿದ್ದೆ ಮಾಡುತ್ತಿರುವ ಚಿತ್ರ ಕಳೆದ ನವೆಂಬರ್ ತಿಂಗಳಲ್ಲಿ ತೆಗೆದಿದ್ದೆನ್ನಲಾಗಿದೆ. ಈ ಚಿತ್ರವಂತೂ #ಪಿಎಂಮೋದಿಸ್ಲೀಪ್ಸ್‌ಆನ್‌ಕಾನ್ಸ್ಟಿಟ್ಯೂಶನ್ ಡೇ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ವೈರಲ್ ಆಗಿತ್ತು. ಮೋದಿ ನಿದ್ದೆ ಮಾಡುತ್ತಿರಲಿಲ್ಲ, ಬದಲಾಗಿ ಅವರು ತಲೆಯನ್ನು ಕೆಲ ಸೆಕೆಂಡುಗಳ ಕಾಲ ಕೆಳಗೆ ಹಾಕಿದ್ದರು ಎಂದು ಅವರ ಪಕ್ಷ ಸದಸ್ಯರು ಅವರನ್ನು ಸಮರ್ಥಿಸುವ ಪ್ರಯತ್ನ ಮಾಡಿದ್ದರು.

ಇಲ್ಲಿವೆ ರಾಜಕಾರಣಿಗಳ ನಿದ್ದೆಯ ಬಗೆಗಿನ ಕೆಲ ಆಸಕ್ತಿದಾಯಕ ಟ್ವೀಟ್ ಗಳು :

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News