×
Ad

ಭಾರತೀಯ ಅಧಿಕಾರಿಗಳನ್ನೇ ಲಂಡನ್‌ಗೆ ಕರೆದ ವಿಜಯ ಮಲ್ಯ!

Update: 2016-07-21 22:23 IST

ಲಂಡನ್, ಜು.21: ಭಾರತೀಯ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್‌ಗೆ ಪಲಾಯನ ಮಾಡಿದ್ದ ಮದ್ಯ ದೊರೆ ವಿಜಯ ಮಲ್ಯ ಇದೀಗ ಭಾರತೀಯ ಅಧಿಕಾರಿಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಅಧಿಕಾರಿಗಳು ಅನಗತ್ಯವಾಗಿ ತಮ್ಮನ್ನು ಕಾಡುತ್ತಿದ್ದು, ವಿಚಾರಣೆ ನಡೆಸಬೇಕಾದರೆ ಇಲ್ಲಿಗೇ ಬರಲಿ ಎಂದು ಸವಾಲು ಹಾಕಿದ್ದಾರೆ. ಅಧಿಕಾರಿಗಳ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದು ಮಲ್ಯ ಹೇಳಿಕೊಂಡಿದ್ದಾರೆ.

ಅಟೊ ಸ್ಪೋರ್ಟ್ಸ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಫೋರ್ಸ್ ಇಂಡಿಯಾ ಫಾರ್ಮ್ಯುಲಾ-1 ತಂಡದ ಮುಖ್ಯಸ್ಥರಾಗಿರುವ ಮಲ್ಯ, ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಿರುವುದರಿಂದ ಭಾರತಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಅಧಿಕಾರಿಗಳು ನನ್ನನ್ನು ಅನಗತ್ಯವಾಗಿ ಕಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚೇನೂ ಹೇಳುವಂತಿಲ್ಲ. ಬಿರುಗಾಳಿಯ ವಿರುದ್ಧ ನಾನು ಸವಾರಿ ಮಾಡಬೇಕು ಎಂದು ಮಲ್ಯ ಹೇಳಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News