×
Ad

ಪ್ರೊ ಕಬಡ್ಡಿ: ಡೆಲ್ಲಿ ವಿರುದ್ಧ ಜೈಪುರಕ್ಕೆ ರೋಚಕ ಜಯ

Update: 2016-07-21 22:59 IST

ಮುಂಬೈ, ಜು.21: ದಬಾಂಗ್ ಡೆಲ್ಲಿಯ ಸವಾಲನ್ನು ವೆುಟ್ಟಿನಿಂತ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡ ಗುರುವಾರ ಇಲ್ಲಿ ನಡೆದ

ಪ್ರೊ ಕಬಡ್ಡಿ ಲೀಗ್‌ನಲ್ಲಿ 24-22 ಅಂತರದಿಂದ ಗೆಲುವು ಸಾಧಿಸಿದೆ.

ಆರಂಭದಲ್ಲಿ ಹಿನ್ನಡೆ ಕಂಡಿದ್ದ ಜೈಪುರ 7ನೆ ನಿಮಿಷದ ಬಳಿಕ ಮುನ್ನಡೆ ಪಡೆಯಿತು. 12 ಪಂದ್ಯಗಳಲ್ಲಿ 7ನೆ ಗೆಲುವು ಸಾಧಿಸಿ ಒಟ್ಟು 42 ಅಂಕ ಗಳಿಸಿರುವ ಜೈಪುರ ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಮೊದಲಾರ್ಧದಲ್ಲಿ 14-11 ರಿಂದ ಮುನ್ನಡೆಯಲ್ಲಿದ್ದ ಜೈಪುರ ಅಂತಿಮ ಹಂತದಲ್ಲಿ ಡೆಲ್ಲಿಯಿಂದ ತೀವ್ರ ಪೈಪೋಟಿ ಎದುರಿಸಿತು. ಮೀರಝ್ ಶೇಖ್‌ರ ಯಶಸ್ವಿ ರೈಡ್‌ನ ಸಹಾಯದಿಂದ 23-22ಕ್ಕೆ ತಲುಪಿದ್ದ ಡೆಲ್ಲಿ ವಿರುದ್ಧ ಕೊನೆಯ ಸೆಕೆಂಡ್‌ನಲ್ಲಿ ಮುನ್ನಡೆ ಸಾಧಿಸಿದ ಜೈಪುರ ರೋಚಕ ಗೆಲುವು ದಾಖಲಿಸಿತು.

 10 ಪಂದ್ಯಗಳಲ್ಲಿ 7ನೆ ಸೋಲು ಕಂಡಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News