×
Ad

ಶಿಖರ್ ಧವನ್, ಕೊಹ್ಲಿ ಅರ್ಧಶತಕ: ಭಾರತ 159/2

Update: 2016-07-21 23:04 IST

ಆ್ಯಂಟಿಗುವಾ, ಜು.21: ಇಲ್ಲಿ ಆರಂಭಗೊಂಡಮೊದಲಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಆತಿಥೇಯವೆಸ್ಟ್‌ಇಂಡೀಸ್ ವಿರುದ್ಧ ನಿಧಾನಗತಿಯ ಬ್ಯಾಟಿಂಗ್‌ಗೆಒತ್ತು ನೀಡಿದೆ.
ಟಾಸ್ ಜಯಿಸಿದ ಭಾರತಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಭಾರತಮೊದಲಇನಿಂಗ್ಸ್‌ನಲ್ಲಿ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಶಿಖರ್ ಧವನ್ ಔಟಾಗದೆ 75 ರನ್ (129ಎ, 7ಬೌ, 1ಸಿ) ಮತ್ತು ನಾಯಕವಿರಾಟ್ ಕೊಹ್ಲಿ 55 ರನ್ (79ಎ, 6ಬೌ) ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಚೇತೇಶ್ವರ ಪೂಜಾರ 16ರನ್ (67ಎ) ಗಳಿಸಿ ಔಟಾಗಿದ್ದಾರೆ.
ಆರಂಭಿಕ ದಾಂಡಿಗಮುರಳಿವಿಜಯ್ ಕೇವಲ 7 ರನ್ ಗಳಿಸಿ ಔಟಾಗಿದ್ದಾರೆ. ಇನಿಂಗ್ಸ್ ಆರಂಭಿಸಿದ ವಿಜಯ್ ಮತ್ತು ಧವನ್ 6.2 ಓವರ್‌ಗಳಲ್ಲಿ 14 ರನ್ ಗಳಿಸುವಷ್ಟರಲ್ಲಿ ಭಾರತದಮೊದಲವಿಕೆಟ್ ಉರುಳಿತ್ತು.ವಿಜಯ್ 7 ರನ್ ಗಳಿಸಿ ಗ್ಯಾಬ್ರಿಯಲ್‌ಗೆವಿಕೆಟ್ ಒಪ್ಪಿಸಿದ್ದಾರೆ. ಎರಡನೆವಿಕೆಟ್‌ಗೆ ಧವನ್ ಮತ್ತು ಪೂಜಾರಜೊತೆಯಾಟದಲ್ಲಿ 60ರನ್ ಸೇರಿಸಿದ್ದಾರೆ.ಚೇತೇಶ್ವರ ಪೂಜಾರ 16 ರನ್ ಗಳಿಸಿ ಔಟಾದರು.


ಸಂಕ್ಷಿಪ್ತ ಸ್ಕೋರ್ ವಿವರ
ಭಾರತಮೊದಲಇನಿಂಗ್ಸ್ 50 ಓವರ್‌ಗಳಲ್ಲಿ 1599/2(ಧವನ್ ಔಟಾಗದೆ 75, ಕೊಹ್ಲಿಔಟಾಗದೆ 55 ಪೂಜಾರ್ 16, ವಿಜಯ್ 7, ಇತರೆ 6; ಗ್ಯಾಬ್ರಿಯಲ್ 29ಕ್ಕೆ 1,ಬಿಶೊ 41ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News