ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ವಾರ್ನರ್?
ಕೊಲಂಬೊ, ಜು.21: ಶ್ರೀಲಂಕಾ ವಿರುದ್ಧ ಕ್ಯಾಂಡಿಯಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್‌ಗೆ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜೋಶ್ ಹೇಝಲ್‌ವುಡ್ ಫಿಟ್ ಆಗುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯದ ಮುಖ್ಯ ಕೋಚ್ ಡರೆನ್ ಲೆಹ್ಮನ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ವಾರ್ನರ್ ಹಾಗೂ ಹೇಝಲ್‌ವುಡ್ ಶ್ರೀಲಂಕಾ ಅಧ್ಯಕ್ಷರ ಇಲೆವೆನ್ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಉಪ ನಾಯಕ ವಾರ್ನರ್ ದಕ್ಷಿಣ ಆಫ್ರಿಕ ವಿರುದ್ಧದ ತ್ರಿಕೋನ ಏಕದಿನ ಸರಣಿ ವೇಳೆ ಎಡ ತೋರುಬೆರಳಿನ ಮುರಿತಕ್ಕೆ ಒಳಗಾಗಿದ್ದರು. ಆ ಬಳಿಕ ಅವರು ಚಿಕಿತ್ಸೆ ಪಡೆಯುತ್ತಿದ್ದು, ತಂಡಕ್ಕೆ ವಾಪಸಾಗಲು ಯತ್ನಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಆಸ್ಟ್ರೇಲಿಯದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಆಡಿ ದಣಿದಿರುವ ಹೇಝಲ್‌ವುಡ್‌ಗೆ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 8 ತಿಂಗಳ ಬಳಿಕ ವಾಪಸಾಗಲಿದ್ದಾರೆ. ಎಡಗೈ ವೇಗದ ಬೌಲರ್‌ಗೆ 2015ರ ನವೆಂಬರ್‌ನಲ್ಲಿ ಮಂಡಿನೋವು ಕಾಣಿಸಿಕೊಂಡಿತ್ತು.