×
Ad

ಆಸೀಸ್ ವಿರುದ್ಧ ಮೊದಲ ಟೆಸ್ಟ್‌ಗೆ ಶ್ರೀಲಂಕಾ ತಂಡ

Update: 2016-07-21 23:21 IST

ಕೊಲಂಬೊ, ಜು.21: ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ಗೆ ಶ್ರೀಲಂಕಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಹೊರತಾಗಿಯೂ ಸಿರಿವರ್ಧನೆ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಸಿರಿವರ್ಧನೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಲಂಕಾ ತಂಡದಲ್ಲಿ ಲಹಿರು ತಿರಿಮನ್ನೆ ಹಾಗೂ ದಡುನ್ ಶನಕಾರನ್ನು ಕೈಬಿಡಲಾಗಿದೆ.

ತಂಡ: ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ದಿನೇಶ್ ಚಾಂಡಿಮಲ್(ಉಪನಾಯಕ), ಡಿಮುತ್ ಕರುಣರತ್ನೆ, ಕೌಶಲ್ ಸಿಲ್ವಾ, ಕುಶಾಲ್ ಪೆರೇರ, ಕುಶಾಲ್ ಮೆಂಡಿಸ್, ಧನಂಜಯ್ ಡಿಸಿಲ್ವಾ, ರೋಶನ್ ಸಿಲ್ವಾ, ನುವಾನ್ ಪ್ರದೀಪ್, ವಿಶ್ವ ಫೆರ್ನಾಂಡೊ, ಅಸಿತ್ ಫೆರ್ನಾಂಡೊ, ರಂಗನ ಹೆರಾತ್, ದಿಲ್‌ರುವಾನ್ ಪೆರೇರ, ಲಕ್ಷಣ್ ಸಂಡಕನ್, ಸುರಂಗ ಲಕ್ಮಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News