ಹೋಪ್‌ಮನ್ ಕಪ್: ಫೆಡರರ್ ಲಭ್ಯ
Update: 2016-07-21 23:22 IST
ಪರ್ತ್, ಜು.21: ಮುಂದಿನ ವರ್ಷಾರಂಭದಲ್ಲಿ ಪರ್ತ್‌ನಲ್ಲಿ ನಡೆಯಲಿರುವ ಹೋಪ್‌ಮನ್ ಕಪ್‌ನ ಮಿಕ್ಸೆಡ್ ಟೀಮ್‌ನಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಸ್ವಿಟ್ಝರ್ಲೆಂಡ್ ತಂಡದಲ್ಲಿ ಆಡಲಿದ್ದಾರೆ.
ವಿಶ್ವದ ನಂ.3ನೆ ಆಟಗಾರ ಫೆಡರರ್ 15 ವರ್ಷಗಳ ಬಳಿಕ ಹೋಪ್‌ಮನ್ ಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, 16ನೆ ರ್ಯಾಂಕಿನ ಬೆಲಿಂಡಾ ಬೆನ್ಸಿಕ್ ಜೊತೆಗೂಡಿ ಆಡಲಿದ್ದಾರೆ. ಹೋಪ್‌ಮನ್ ಕಪ್ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ಗೆ ತಾಲೀಮು ಪಂದ್ಯವಾಗಿದೆ.
34ರ ಹರೆಯದ ಫೆಡರರ್ 2001ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಹೋಪ್‌ಮನ್ ಕಪ್‌ನ್ನು ಜಯಿಸಿದ್ದರು.
ಈವರ್ಷ ಹೋಪ್‌ಕಪ್ ಕಪ್‌ನ್ನು ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಹಾಗೂ ಡರಿಯಾ ಗಾವ್ರಿಲೋವಾ ಗೆದ್ದುಕೊಂಡಿದ್ದಾರೆ. ಮುಂದಿನ ವರ್ಷ ಈ ಟೂರ್ನಿಯು ಜ.1 ರಿಂದ 7ರ ತನಕ ನಡೆಯುವುದು.