ರಜನಿಕಾಂತ್ ಚಿತ್ರ "ಕಬಾಲಿ" ಸೂಪರ್ ಹಿಟ್
Update: 2016-07-22 10:39 IST
ಬೆಂಗಳೂರು, ಜು.22: ಚಿತ್ರ ಪ್ರಿಯರ ಕುತೂಹಲ ಕೆರಳಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಚಿತ್ರ "ಕಬಾಲಿ" ಹಿಟ್ ಆಗಿದ್ದು, ದೇಶಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿರುವ ಕಬಾಲಿ ಚಿತ್ರ ಸುಮಾರು 4200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ
ತಮಿಳುನಾಡಿನಲ್ಲಿ ಸುಮಾರು 650 ತೆರೆ ಗಳಲ್ಲಿ ತೆರೆಕಂಡಿರುವ ಕಬಾಲಿ, ಕರ್ನಾಟಕದಲ್ಲಿ 251, ಆಂಧ್ರ ಪ್ರದೇಶದಲ್ಲಿ 530, ತೆಲಂಗಾಣದಲ್ಲಿ 335, ಕೇರಳದಲ್ಲಿ 308 ಸೇರಿದಂತೆ ಉತ್ತರ ಭಾರತದ ಸುಮಾರು 1, 100 ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ..
ಅಮೆರಿಕದಲ್ಲಿ 450 ಚಿತ್ರ ಮಂದಿರಗಳು ಸೇರಿದಂತೆ ಪ್ರಪಂಚದ ನಾನಾ ದೇಶಗಳ ಒಟ್ಟು 550 ಚಿತ್ರಮಂದಿರಗಳಲ್ಲಿ ಕಬಾಲಿ ಪ್ರದರ್ಶನವಾಗುತ್ತಿದೆ. ಒಟ್ಟು 4200 ಸ್ಕ್ರೀನ್ ಗಳಲ್ಲಿ ಏಕ ಕಾಲದಲ್ಲಿ ಚಿತ್ರ ತೆರೆಗೆ ಅಪ್ಪಳಿಸಿದೆ. ಕರ್ನಾಟಕದಲ್ಲಿ ಸುಮಾರು 251ಕ್ಕೂ ಹೆಚ್ಚು ಬೆಳ್ಳಿ ತೆರೆ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.