×
Ad

ಕಳಪೆ, ಸವಕಲು ಕಬಾಲಿ

Update: 2016-07-23 15:33 IST

ಸಿನಿಮಾಗಳ ಸೂಪರ್ ಸ್ಟಾರ್ ಗಳು ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿರುವ ಮಕ್ಕಳಂತೆ. ಅವರುಆಟ ಆಡುವಾಗ ನಿಯಮಗಳನ್ನು ಪಾಲಿಸಬೇಕೆಂದು ನಾವು ನಿರೀಕ್ಷಿಸುವಂತಿಲ್ಲ, ಅವರು ತಮಗಿಷ್ಟ ಬಂದಂತೆ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಅವರು ಸ್ಮಾರ್ಟ್ ಆಗಿರುವಂತೆ ಕಾಣಲು ಅವರು ಹೇಳುವುದು ಹಾಗೂ ಮಾಡುವುದೆಲ್ಲಾ ಅರ್ಥಗರ್ಭಿತವಾಗಿರಬೇಕೆಂದೇನೂ ಇಲ್ಲ.ಒಬ್ಬ ಭಾರತೀಯ ಸೂಪರ್ ಸ್ಟಾರ್ ತನಗಿಷ್ಟ ಬಂದಂತೆ ಪರದೆಯ ಮೇಲೆ ನಡೆಸುವ ದೌರ್ಜನ್ಯಗಳು ಪ್ರಶ್ನಾತೀತವಾಗಿದ್ದರೂ ಎಷ್ಟರ ಮಟ್ಟಿಗೆಇದು ಮುಂದುವರಿಯಬಹುದು ? ಸೂಪರ್ ಸ್ಟಾರ್ ಒಬ್ಬರ ಅಭಿನಯದ ಒಂದು ತೀರ ಕೆಟ್ಟ ಚಿತ್ರ ಬ್ಲಾಕ್ ಬಸ್ಟರ್ ಆಗುವುದಾದರೆ ಹಾಗೂ ಅದು ಆತನ ಬಗ್ಗೆ ಹೆಚ್ಚು ಹೇಳದೆ ಚಿತ್ರ ಪ್ರೇಕ್ಷಕರತ್ತವೇ ಎಲ್ಲರ ಗಮನ ಕೇಂದ್ರೀಕರಿಸುವುದಾದರೆ ಏನೆನ್ನಬಹುದು ?

ರಜನೀಕಾಂತ್ ಅವರ ಕಬಾಲಿ ಇನ್ನೂ ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿಲ್ಲ, ಮುಂದೆ ಅದು ಹಿಟ್ ಆದರೂನಟನ ಅಭಿಮಾನಿಗಳು ತಮ್ಮ ಅಭಿಮಾನದ ಮಟ್ಟದ ಬಗ್ಗೆ ಚಿಂತಿಸಬೇಕಾಗುತ್ತದೆಯಲ್ಲದೆ ಅದು ಅವರ ನೆಚ್ಚಿನ ನಟನನ್ನು ಎತ್ತ ಕೊಂಡೊಯ್ಯುತ್ತದೆ ಎಂಬುದರ ಬಗ್ಗೆಯೂ ಯೋಚಿಸಬೇಕಾಗುತ್ತದೆ.

ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಕೌಲಾಲಂಪುರದ ಜೈಲಿನಿಂದ 25 ವರ್ಷಗಳ ನಂತರ ಬಿಡುಗಡೆಯಾಗುವಾಗ ದೊಡ್ಡ ಗ್ಯಾಂಗ್ ಸ್ಟರ್ ಆಗಿರುತ್ತಾರೆ. ಚಿತ್ರ ಮುಂದುವರಿಯುತ್ತಾ ಹೋದಂತೆ ಕಬಾಲಿ ಎಲ್ಲಾ ಗ್ಯಾಂಗ್ ಸ್ಟರ್ ಗಳಂತಲ್ಲ ಎಂದು ತಿಳಿಯುತ್ತದೆ. ಗ್ಯಾಂಗ್ 43 (ಆತನ ಎದುರಾಳಿಗಳು) ಸದಸ್ಯರಂತೆ ಕಬಾಲಿಯು ಡ್ರಗ್ಸ್ ಹಾಗೂ ಮಹಿಳೆಯರ ಕಳ್ಳಸಾಗಣಿಕೆಯಲ್ಲಿ ತೊಡಗುವುದಿಲ್ಲ. ಹೆಚ್ಚಿನ ಭಾರತೀಯ ಸಿನಿಮಾಗಳಂತೆಈ ಹೀರೋ ಬಂದೂಕು ಹಿಡಿದುಕೊಂಡಿರುವ ಸನ್ಯಾಸಿಯಂತೆ. ಆತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜೈಲಿನ ಇತರ ಕೈದಿಗಳು ಭಾರೀ ಚಪ್ಪಾಳೆ ಮಾಡುತ್ತಾರೆ. ಅಮಲು ಪದಾರ್ಥ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವ ಫ್ರೀ ಲೈಫ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಆತ ಪೋಷಿಸುತ್ತಾನೆ. ಜೈಲಿನಿಂದ ಹೊರ ಬಂದು ಐದು ನಿಮಿಷಗಳಾಗುವಷ್ಟರಲ್ಲಿ ಆತ ತನ್ನ ವೈರಿಗಳ ಮನೆಗೆ ನುಗ್ಗಿ ಎಲ್ಲರನ್ನೂ ಸದೆ ಬಡಿದು ತನ್ನ ಆಗಮನವನ್ನು ಘೋಷಿಸುತ್ತಾನೆ. ನಂತರತನ್ನ ಕಾರನ್ನು ತನ್ನ ವೈರಿ ಗ್ಯಾಂಗಿನ ಸದಸ್ಯನೊಬ್ಬನ ಮೇಲೆ ಹಾಯಿಸುತ್ತಾನೆ. ಯಾರು ಕೂಡ ಇಂತಹ ದೃಶ್ಯಗಳ ಬಗ್ಗೆ ಪ್ರಶ್ನಿಸುವುದಿಲ್ಲ. ಕಬಾಲಿಯಲ್ಲಿ ಗಮನಿಸತಕ್ಕ ಒಂದು ಅಂಶವೆಂದರೆ ಚಿತ್ರದಲ್ಲಿ ಹಾಸ್ಯ ಸಂಪೂರ್ಣ ಕಣ್ಮರೆಯಾಗಿದ್ದು ಚಿತ್ರ ವೀಕ್ಷಿಸಿದ ಮೇಲೆ ಪ್ರೇಕ್ಷಕನೇ ಚಿತ್ರವನ್ನು ನೋಡಿ ನಗುವ ಪ್ರಮೇಯವಿದೆ.

ಚಿತ್ರದ ಒಂದು ದೃಶ್ಯದಲ್ಲಿ ಫ್ರೀ ಲೈಫ್ ಫೌಂಡೇಶನ್ನಿನ ಒಬ್ಬ ಯುವತಿ ಕಬಾಲಿಯನ್ನು ‘ಪಾಪಾ’ ಎಂದು ಕರೆದಾಗ ಸ್ವಲ್ಪ ಮಟ್ಟಿನ ಅಭಾಸವಾಗುತ್ತದೆ. ಕಾರಣ ಯಾವ ಚಿತ್ರದಲ್ಲೂ ರಜನೀಕಾಂತ್ ತಮ್ಮ ವಯಸ್ಸಿನ ಪಾತ್ರ ಮಾಡಿರಲೇ ಇಲ್ಲ. ಆದರೆ ಕಬಾಲಿ ಅದಕ್ಕೆ ಅಪವಾದವಾಗಿದೆ.ಹಿಂದಿಯಲ್ಲಿ ಡಬ್ ಮಾಡಲಾದ ಡೈಲಾಗ್ ಗಳು ಕೂಡ ನಿರೀಕ್ಷಿತ ಗುಣಮಟ್ಟದಲ್ಲಿಲ್ಲ.

ಚಿತ್ರ ಹೀಗೆ ಮುಂದಕ್ಕೆ ಸಾಗುತ್ತಾ ಹೋದಂತೆ ರಜನೀಕಾಂತ್ ಹಾಗೂ ರಾಧಿಕಾ ಆಪ್ಟೆಅಭಿನಯ ಸಾಧಾರಣವಾಗಿದೆಯೆಂದೆನಿಸಿದರೆ, ಉಳಿದ ನಟರ ಅಭಿನಯ ತೀರಾ ಸಪ್ಪೆಯೆನಿಸುತ್ತದೆ.

ಕಬಾಲಿ ಒಂದು ವಸ್ತುನಿಷ್ಠ ಚಿತ್ರವಾಗಿದ್ದರೆ ಅದನ್ನೊಪ್ಪಬಹುದಿತ್ತೋ ಏನೋ ಆದರೆ ಇಲ್ಲಿ ರಜನೀಕಾಂತ್ ತಮ್ಮ ಹಳೆಯ ಟ್ರಿಕ್ ಗಳನ್ನು ನಡೆಸಿ ಪ್ರೇಕ್ಷಕರನ್ನು ಸೆಳೆಯಲು ಯತ್ನಿಸಿದ್ದರೂ ಈ ಅವರ ಟ್ರಿಕ್ ಗಳು ಕೆಲಸ ಮಾಡದು, ಮೇಲಾಗಿ ಚಿತ್ರ ಸಂಪೂರ್ಣವಾಗಿ ಮಕ್ಕಳಾಟಿಕೆಯಂತಿದೆ. ಅಲ್ಲಿನ ಎಲ್ಲಾ ದೃಶ್ಯಗಳೂ 12 ರ ಹರೆಯದ ಮಕ್ಕಳ ಕಲ್ಪನಾಲಹರಿಯಂತಿವೆ. ಆದರೂ ಇಂತಹ ಒಂದು ಚಿತ್ರ ರಜನೀಕಾಂತ್ ಅಭಿಮಾನಿಗಳಲ್ಲಿ ಮೂಡಿಸಿದ ಅತ್ಯುತ್ಸಾಹ ನೋಡಿ ಆಶ್ಚರ್ಯವಾಗುತ್ತದೆ. ಅದೇ ಸಮಯ ಆಶ್ಚರ್ಯವಾಗುತ್ತದೆ ಎಂದು ಹೇಳುವುದು ಕೂಡ ತಪ್ಪಾಗುತ್ತದೆ. ಕಾರಣ ನಮ್ಮ ಸೂಪರ್ ಸ್ಟಾರ್ ಗಳನ್ನು ನಾವು ಪ್ರಶ್ನಿಸುವುದನ್ನು ನಿಲ್ಲಿಸಿರುವುದರಿಂದ ಅದಕ್ಕೆ ತಕ್ಕ ಬೆಲೆಯನ್ನು ನಾವು ತೆರಲೇಬೇಕಾಗುತ್ತದೆ.

‘‘ಒಂದು ಉತ್ಕೃಷ್ಟ ಚಿತ್ರದಲ್ಲಿ ಮೂರು ಉತ್ತಮ ದೃಶ್ಯಗಳು ಹಾಗೂ ಯಾವುದೇ ಕೆಟ್ಟ ದೃಶ್ಯಗಳಿರುವುದಿಲ್ಲ’’ ಎಂದು ಅಮೇರಿಕಾದ ಚಿತ್ರ ನಿರ್ಮಾತೃ ಹೌವಾರ್ಡ್ ಹಾಕ್ಸ್ ಹೇಳಿದ್ದರು. ಆದರೆಒಂದೂ ಉತ್ತಮ ದೃಶ್ಯವಿಲ್ಲದೆ ಡಜನ್ ಗಟ್ಟಲೆ ಕೆಟ್ಟ ದೃಶ್ಯಗಳಿರುವ ಚಿತ್ರವನ್ನು ಏನೆನ್ನಬೇಕೋ ತಿಳಿಯದು.

ಕೃಪೆ : ದಿ ವೈರ್, ತನುಲ್ ಠಾಕೂರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News