×
Ad

ದಯಾಶಂಕರ್‌ರನ್ನು ಕತ್ತೆ ಮಾಡಿದ ಮಾಯಾವತಿಯ ಬೆಂಬಲಿಗರು!

Update: 2016-07-24 16:03 IST

ಗೊರಕ್‌ಪುರ, ಜುಲೈ 24: ಬಿಎಸ್ಪಿ ಅಧ್ಯಕ್ಷೆ ಮಾಯಾವತಿಯ ವಿರುದ್ಧ ಅಪಮಾನಿಸಿ ಹೇಳಿಕೆ ನೀಡಿದ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಘಟಕದ ಮಾಜಿ ಉಪಾಧ್ಯಕ್ಷ ದಯಾಶಂಕರ್‌ರ ಪಾಲಿಗೆ ಕಷ್ಟ ಕಡಿಮೆಯಾಗುವಂತೆ ಕಂಡು ಬರುತ್ತಿಲ್ಲ. ದಯಾಶಂಕರ್‌ರ ಕುರಿತು ಉತ್ತರಪ್ರದೇಶದಲ್ಲಿ ಹಲವು ರೀತಿಯ ಪ್ರತಿಭಟನೆಗಳು ರಂಗೇರುತ್ತಿವೆ ಎಂದು ವರದಿಯಾಗುತ್ತಿದೆ. ಗೊರಕ್‌ಪುರದಲ್ಲಿ ಶನಿವಾರದಂದು ಅಂಬೇಡ್ಕರ್‌ವಾದಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ದಯಾಶಂಕರ್ ಸಿಂಗ್‌ರನ್ನು ಕತ್ತೆಯ ರೂಪದಲ್ಲಿ ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ತೋರ್ಪಡಿಸಿದ್ದಾರೆಂದು ವರದಿ ತಿಳಿಸಿದೆ.

ಗೋರಕ್‌ಪುರದ ಅಂಬೇಡ್ಕರ್‌ವಾದಿ ವಿದ್ಯಾರ್ಥಿಸಂಘಟನೆಯ ಕಾರ್ಯಕರ್ತರು ಅಮರ್‌ಸಿಂಗ್ ಪಾಸ್ವಾನ್‌ರ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಕತ್ತೆಯ ಮೇಲೆ ದಯಾಶಂಕರ್ ಎಂದು ಬರೆದು ಮುರ್ದಾಬಾದ್ ಘೋಷಣೆ ಕೂಗಿದ್ದಲ್ಲದೆಅವರು ಕರೆ ತಂದ ಕತ್ತೆಯನ್ನು ತೋರಿಸಿ ದಯಾಶಂಕರ್‌ರನ್ನು ಗೊರಕ್‌ಪುರದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳುತ್ತಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News