×
Ad

ಶಾಲಾ ವ್ಯಾನ್ ಗೆ ರೈಲು ಢಿಕ್ಕಿ: ಎಂಟು ವಿದ್ಯಾರ್ಥಿಗಳು ಬಲಿ

Update: 2016-07-25 11:48 IST

ಭಾದೊಹಿ, ಜು.25: ಉತ್ತರ ಪ್ರದೇಶದ ಭಾದೊಹಿ ಜಿಲ್ಲೆಯ ಅಯುರೆಯೆ ಎಂಬಲ್ಲಿ ರೈಲ್ವೇ ಹಳಿಯನ್ನು ದಾಟುತ್ತಿದ್ದ ಶಾಲಾ ವ್ಯಾನ್ ಗೆ ರೈಲು ಢಿಕ್ಕಿ ಹೊಡೆದ ಪರಿಣಾಮವಾಗಿ ಎಂಟು ಮಂದಿ ಮೃತಪಟ್ಟು , ಹಲವು ಮಂದಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಟೆಂಡರ‍್ ಹಾರ್ಟ್ ಸ್ಕೂಲ್‌ಗೆ ಸೇರಿದ ವಾಹನ ರೈಲು ಹಳಿ ದಾಟುತ್ತಿದ್ದಾಗ, ವೇಗವಾಗಿ ಧಾವಿಸಿ ಬಂದ ವಾರಣಾಶಿ-ಅಲಹಾಬಾದ್ ಪ್ಯಾಸೆಂಜರ‍್ ರೈಲು ವ್ಯಾನ್‌ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.  ಪರಿಣಾಮವಾಗಿ ಎಂಟು ಮಂದಿ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡವರನ್ನು ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News