ಸಾರಿಗೆ ನೌಕರರ ಮುಷ್ಕರ : ನಮ್ಮ ಮೆಟ್ರೋವನ್ನು ಅವಲಂಭಿಸಿದ ಪ್ರಯಾಣಿಕರು

Update: 2016-07-25 07:16 GMT

ಬೆಂಗಳೂರು, ಜು.25: ರಾಜ್ಯದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಪ್ರತಿದಿನ ಬೆಳಗ್ಗೆ 13 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇಂದು  ಪ್ರಯಾಣಿಕರ ಸಂಖ್ಯೆ 18 ಸಾವಿರಕ್ಕೆ ಏರಿದೆ.ಬೆಳಗ್ಗೆ 6 ಗಂಟೆಯಿಂದ 9 ಗಂಟೆ ನಡುವೆ ಸುಮಾರು 18 ಸಾವಿರ ಜನರು ಪ್ರಯಾಣಿಸಿದ್ದಾರೆ.

*ಸಾರಿಗೆ ನೌಕರರ ಮುಷ್ಕರ : 120 ಸರಕಾರಿ ಬಸ್ ಗಳಿಗೆ ಹಾನಿ

*ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ರೈಲ್ ಗಳಿಗೆ ಹೆಚ್ಚುವರಿ ನಿಲುಗಡೆ ವ್ಯವಸ್ಥೆ .

* ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ  ರೈಲು ಸಂಚರಿಸುತ್ತಿದೆ.

*15 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ  ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News