×
Ad

54 ಐಸಿಸ್ ಬೆಂಬಲಿಗರ ಸೆರೆ:ಅಹೀರ

Update: 2016-07-26 20:20 IST

ಹೊಸದಿಲ್ಲಿ,ಜು.26: ಈವರೆಗೆ ಭಯೋತ್ಪಾದಕ ಸಂಘಟನೆ ಐಸಿಸ್‌ನ 54 ಬೆಂಬಲಿಗರನ್ನು ಅವರು ದೇಶದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆಸುವ ಮೊದಲೇ ಬಂಧಿಸಲಾಗಿದೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಅಹೀರ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
  ದೇಶದಲ್ಲಿ ಐಸಿಸ್/ಐಎಸ್ ವಿದ್ಯಮಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮತ್ತು ರಾಜ್ಯಗಳ ಪೊಲೀಸರು ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದ ಅವರು, ಜಮ್ಮು-ಕಾಶ್ಮೀರದಲ್ಲಿ ವಿಭಿನ್ನ ಸಂದರ್ಭಗಳಲ್ಲಿ ದಾರಿತಪ್ಪಿದ ಕೆಲವು ಯುವಕರು ಐಸಿಸ್ ಧ್ವಜಗಳನ್ನು ಹಾರಿಸಿರುವ ಕೆಲವು ಘಟನೆಗಳು ಗಮನಕ್ಕೆ ಬಂದಿವೆ ಮತ್ತು ಇಂತಹವರ ವಿರುದ್ಧ ಕಾನೂನಿಗನುಗುಣವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News