×
Ad

ಮುಖ್ಯಮಂತ್ರಿ ಆನಂದಿಬೆನ್ ಪಟೇಲ್‌ ರಾಜೀನಾಮೆ

Update: 2016-08-01 17:46 IST

ಅಹ್ಮದಾಬಾದ್, ಆ.1: ಗುಜರಾತ್ ರಾಜ್ಯದ ಮುಖ್ಯ ಮಂತ್ರಿ ಆನಂದಿಬೆನ್ ಪಟೇಲ್‌ ರಾಜೀನಾಮೆ ನೀಡಿದ್ದಾರೆ.

ಈಗಾಗಲೇ ಪಕ್ಷದ ನಾಯಕರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.

ಪಟೇಲ್‌ ಸಮುದಾಯದ ಒಬಿಸಿ ಮೀಸಲಾತಿ ಗಲಾಟೆ, ಉನಾದಲ್ಲಿ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಂಡು ಬಂದ ದಲಿತರ ಪ್ರತಿಭಟನೆ, ಹಲ್ಲೆಯನ್ನು ಖಂಡಿಸಿ ಹದಿನೆಂಟು ದಲಿತ ಯುವಕರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಈ ಪೈಕಿ ಓರ್ವನ ಸಾವು ಈ ಎಲ್ಲ ಕಾರಣದಿಂದಾಗಿ ಆನಂದಿಬೆನ್‌ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ಚುನಾವಣೆಯ ವೇಳೆಗೆ ನಾಯಕತ್ವ ಬದಲಾವಣೆಗೆ ಚಿಂತನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News