ನನಗೆ ಹೊಡೆದಿದ್ದಾರೆ-ರಕ್ಷಣೆ ಬೇಕು! : ರಾಜ್ಯಸಭೆಯಲ್ಲಿ ತಮಿಳುನಾಡು ಸಂಸದೆಯ ಅಳಲು

Update: 2016-08-01 14:02 GMT

ಹೊಸದಿಲ್ಲಿ, ಆ.1: ಸರಕಾರ ತನ್ನನ್ನು ರಕ್ಷಿಸುವುದೇ? ತನಗೆ ರಕ್ಷಣೆ ಬೇಕು ಎಂದು ತಮಿಳುನಾಡಿನ ಸಂಸದೆ ಶಶಿಕಲಾ ಪುಷ್ಪಾ ಸೋಮವಾರ ಸಂಸತ್ತಿನಲಲಿ ಅಳುತ್ತ ಮೊರೆಯಿಟ್ಟಿದ್ದಾರೆ. ಅದಾಗಿ ಸ್ವಲ್ಪವೇ ಸಮಯದಲ್ಲಿ, ಪಕ್ಷಕ್ಕೆ ಮುಜುಗರ ಉಂಟುಮಾಡಿದ ಆರೋಪದಲ್ಲಿ ಎಡಿಎಂಕೆ ಅವರ ಉಚ್ಚಾಟನೆಯನ್ನು ಘೋಷಿಸಿದೆ.

ರಾಜ್ಯಸಭೆಯಲ್ಲಿ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಎದ್ದು ನಿಂತ ಶಶಿಕಲಾ, ಒಬ್ಬ ನಾಯಕ ಸಂಸದೆಯೊಬ್ಬನನ್ನು ಥಳಿಸಲು ಸಾಧ್ಯವೆಂದಾದರೆ ಎಲ್ಲಿದೆ ಮಾನವ ಘನತೆ? ತಾನು ಸರಕಾರದಿಂದ ರಕ್ಷಣೆ ಬಯಸುತ್ತೇನೆ. ತಮಿಳುನಾಡಿನಲ್ಲಿ ತನಗೆ ಸುರಕ್ಷೆಯಿಲ್ಲ ಎಂದು ಆರೋಪಿಸಿದರು.

ಸದನಕ್ಕೆ ಬರಲಾಗದ ಹಾಗೂ ತನ್ನನ್ನು ಸಮರ್ಥಿಸಿಕೊಳ್ಳಲಾಗದ ಯಾವನೇ ವ್ಯಕ್ತಿಯ ಹೆಸರನ್ನು ಎತ್ತುವಂತಿಲ್ಲ ಎಂದು ಉಪಸಭಾಪತಿ ಪಿ.ಜೆ. ಕುರಿಯನ್, ಸಂಸದೆಯನ್ನು ತಡೆದರು.

40ರ ಹರೆಯದ ಶಶಿಕಲಾ ಯಾರದೇ ಹೆಸರನ್ನು ಎತ್ತಿಲ್ಲವಾದರೂ, ಅವರು ಸಂಸತ್ತಿನ ಹೊರಗೆ, ನಿನ್ನೆ ತನ್ನನ್ನು ಡಿಎಂಕೆಯ ಸೋದ್ಯೋಗಿಯೊಬ್ಬರು ಥಳಿಸಿದ್ದರೆಂದು ಸುದ್ದಿಗಾರರೊಡನೆ ಆರೋಪಿಸಿದ್ದರೆಂದು ಇಂಡೊ-ಏಶ್ಯನ್ ನ್ಯೂಸ್ ಸರ್ವೀಸ್ ವರದಿ ಮಾಡಿತ್ತು.

ಕಳೆದ ವಾರಾಂತ್ಯದಲ್ಲಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಶಶಿಕಲಾ ಹಾಗೂ ಡಿಎಂಕೆ ಸಂಸದ ತ್ರಿಚಿ ಶಿವರ ನಡುವೆ ಜಗಳ ನಡೆದಿತ್ತು. ಅದರಿಂದಾಗಿ ಅವರಿಬ್ಬರನ್ನೂ ವಿಮಾನದಿಂದ ಹೊರ ಹಾಕಲಾಗಿತ್ತು. ಅದನ್ನು ವಿವರಿಸುವ ವೇಳೆ ಶಶಿಕಲಾ ಕಣ್ಣೀರ ಕೋಡಿಯನ್ನೇ ಹರಿಸುತ್ತಿದ್ದರು.

ಸಂಸದೀಯ ಹುದ್ದೆಗೆ ರಾಜೀನಾಮೆ ನೀಡುವಂತೆ ತನ್ನ ನಾಯಕಿ(ಜಯಲಲಿತಾ) ಬಲವಂತ ಮಾಡುತ್ತಿದ್ದಾರೆ. ತಾನು ದೇಶ ಸೇವೆ ಮಾಡಲು ಬಯಸುತ್ತಿದ್ದೇನೆ ಎಂದವರು ದೂರಿದರು.

ಅದರ ಬೆನ್ನಲ್ಲೇ ಎಡಿಎಂಕೆ ಹೇಳಿಕೆಯೊಂದನ್ನು ಹೊರಡಿಸಿ, ಪಕ್ಷಕ್ಕೆ ಭಾರೀ ಅಗೌರವ ತಂದುದಕ್ಕಾಗಿ ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆಯೆಂದು ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News