×
Ad

ದೇಶಾದ್ಯಂತ ಮದ್ಯ ನಿಷೇಧ ಇಲ್ಲ: ಕೇಂದ್ರ

Update: 2016-08-02 23:45 IST

ಹೊಸದಿಲ್ಲಿ,ಆ.2: ಮದ್ಯಪಾನ ನಿಷೇಧಿಸಲು ರಾಜ್ಯ ಸರಕಾರಗಳಿಗೆ ತಾನು ನೆರವು ನೀಡಬಹುದು. ಆದರೆ ದೇಶಾದ್ಯಂತ ಮದ್ಯಪಾನವನ್ನು ನಿಷೇಧಿಸುವ ಯಾವುದೇ ಯೋಜನೆ ತನ್ನ ಮುಂದಿಲ್ಲವೆಂದು ಕೇಂದ್ರವು ಮಂಗಳವಾರ ಲೋಕಸಭೆಗೆ ತಿಳಿಸಿದೆ.

ಸದನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಹನ್ಸ್‌ರಾಜ್ ಗಂಗರಾಮ್ ಅಹಿರ್, 2012 ಹಾಗೂ 2014ರ ಮಧ್ಯೆ 2927 ಮಂದಿ ಕಳ್ಳಭಟ್ಟಿ ಅಥವಾ ಅಕ್ರಮ ಮದ್ಯಸೇವಿಸಿ ಸಾವನ್ನಪ್ಪಿದ್ದಾರೆಂದು ತಿಳಿಸಿದರು. ಇವರ ಪೈಕಿ 2012ರಲ್ಲಿ 731 ಮಂದಿ, 2013ರಲ್ಲಿ 497 ಹಾಗೂ 2014ರಲ್ಲಿ 1699 ಮಂದಿ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದರು.
 ಈ ವರ್ಷದ ಜೂನ್‌ವರೆಗೆ ವಿವಿಧ ಕಾನೂನು ಅನುಷ್ಠಾನ ಸಂಸ್ಥೆಗಳು 1366.35 ಕೆ.ಜಿ.ಅಂಫೆಟಾಮೈನ್, 6.51 ಕೆ.ಜಿ. ಕೊಕೇನ್, 44,811.82 ಕೆ.ಜಿ. ಎಫೆಡ್ರೈನ್, 38,418.89 ಕೆ.ಜಿ. ಗಾಂಜಾ, 1,144.12 ಕೆ.ಜಿ. ಹಾಶೀಶ್, 351.12 ಕೆ.ಜಿ. ಹೆರಾಯಿನ್, 16.57 ಕೆ.ಜಿ.ಕೆಟಾಮೈನ್, 663.15 ಕೆ.ಜಿ. ಅಫೀಮು, 2,05,150 ಬಾಟಲಿ ಫೆನ್ಸಿಡೈಲ್ ಕಫ್‌ಸಿರಪ್, 34,016 ಅಫೀಮು ಹುಲ್ಲು ಹಾಗೂ 43.74 ಕೆ.ಜಿ ನಕಲಿ ಎಫೆಡ್ರೈನ್ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿವೆಯೆಂದು ಸಚಿವ ಅಹಿರ್ ಲೋಕಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News