×
Ad

ಧನ್ಸಿಕಾ ಶೈನಿಂಗ್

Update: 2016-08-03 14:56 IST

ಜನಿಕಾಂತ್ ಚಿತ್ರಗಳಲ್ಲಿ ಸಹನಟರಾಗಲಿ, ಹಿರೋಯಿನ್‌ಗಳಾಗಲಿ ಮಿಂಚುವುದು ಬಹಳ ಕಡಿಮೆ. ಯಾಕೆಂದರೆ ರಜನಿಯೇ ಇಡೀ ಚಿತ್ರವನ್ನು ಆವರಿಸಿರುತ್ತಾರೆ. ಆದರೆ ಇದಕ್ಕೆ ಅಪವಾದವೆಂಬಂತೆ ಅಗೊಮ್ಮೆ ಈಗೊಮ್ಮೆ ಕೆಲ ಹಿರೋಯಿನ್‌ಗಳು ಕೂಡಾ ಅವರ ಚಿತ್ರಗಳಲ್ಲಿ ಮಿಂಚಿದ್ದಾರೆ. ಉದಾಹರಣೆಗೆ ಪಡೈಯಪ್ಪ ಚಿತ್ರದಲ್ಲಿ ನಾಯಕಿ ರಮ್ಯಾಕೃಷ್ಣ , ರಜನಿಗೆ ಸರಿಸಾಟಿಯಾಗಿ ನಟಿಸಿ ಸೈ ಅನಿಸಿಕೊಂಡಿದ್ದರು. ಆದರೆ ಇದೀಗ ಜೋರಾಗೇ ಸದ್ದು ಮಾಡುತ್ತಿರುವ ಕಬಾಲಿ ಚಿತ್ರದಲ್ಲಿ ಸಹನಟಿಯೊಬ್ಬಳು ಎಲ್ಲರ ಗಮನಸೆಳೆದಿದ್ದಾಳೆ. ಆಕೆ ಮತ್ತ್ಯಾರೂ ಅಲ್ಲ, ಅಪ್ಪಟ ತಮಿಳು ತಾರೆ ಧನ್ಸಿಕಾ.

  2006ರಲ್ಲಿ ತೆರೆಕಂಡ ತಿರುಡಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಧನ್ಸಿಕಾ ಆನಂತರ ಆರವನ್, ಪ್ರೇರಣೈ ಸೇರಿದಂತೆ ಸುಮಾರು 9 ಚಿತ್ರಗಳಲ್ಲಿ ನಟಿಸಿದ್ದರೂ, ಅವ್ಯಾವುದೂ ಆಕೆಗೆ ಬ್ರೇಕ್ ನೀಡಿರಲಿಲ್ಲ. ಇದೀಗ ಕಬಾಲಿ ಆಕೆಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಲಿದೆಯೆಂದು ಹೇಳಲಾಗುತ್ತಿದೆ. ಕಬಾಲಿಯ ಪುತ್ರಿ ಯೋಗಿಯಾಗಿ ಪವರ್‌ಫುಲ್ ಅಭಿನಯ ನೀಡಿರುವ ಧನ್ಸಿಕಾ, ಆ್ಯಕ್ಷನ್ ಮತ್ತು ಸೆಂಟಿಮೆಂಟ್ ದೃಶ್ಯಗಳಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಅಂದಹಾಗೆ ಕಬಾಲಿ ಆಕೆಯ ಹತ್ತನೆ ಚಿತ್ರವಾಗಿದೆ. ಮುಂದಿನ ದಿನಗಳಲ್ಲಿ ತಮಿಳಿನ ಬಿಗ್‌ಬಜೆಟ್ ಚಿತ್ರಗಳು ಖಂಡಿತವಾಗಿಯೂ ಆಕೆಯನ್ನು ಅರಸಿ ಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಕಬಾಲಿ, ಓರ್ವ ನಟಿಯ ಅಗಾಧ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News