"ಕ್ರೈಸ್ತರು ಸೇವೆಯ ಜೊತೆ ಮತಾಂತರವನ್ನೂ ಮಾಡುತ್ತಾರೆ": ಬಾಬಾ ರಾಮ್‌ದೇವ್

Update: 2016-08-03 10:37 GMT

 ಚೆನ್ನೈ ಆ.3: ಕ್ರೈಸ್ತರನ್ನು ಉಲ್ಲೇಖಿಸಿ ರಾಮ್‌ದೇವ್ ಹೊಸವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ವರದಿಯಾಗಿರುವ ಪ್ರಕಾರ ಚೆನ್ನೈನಲ್ಲಿ ಮಂಗಳವಾರ ಅವರು " ಕ್ರೈಸ್ತರು ಚ್ಯಾರಿಟಿ ಕೆಲಸಮಾಡುತ್ತಾರೆ. ಜೊತೆಗೆ ಮತಾಂತರದಲ್ಲಿಯೂ ವ್ಯಸ್ತರಾಗಿದ್ದಾರೆ" ಎಂದು ಹೇಳಿದ್ದಾರೆ.

     ಅಲ್ಲಿ ಎಂಟನೆ ಹಿಂದೂ ಆಧ್ಯಾತ್ಮಿಕ ಹಾಗೂ ಸೇವಾಮೇಳ 2016" ಇದರಲ್ಲಿ ಮಾತಾಡುತ್ತಾ ರಾಮ್ ರ ಪ್ರಚೋದಕ ಹೇಳಿಕೆ ಮಾಧ್ಯಮಗಳ ಗಮನ ಸೆಳೆಯಿತೆಂದು ವರದಿ ತಿಳಿಸಿದೆ. " ಕ್ರೈಸ್ತರು ಬಹಳಷ್ಟು ಪರೋಪಕಾರ ಮಾಡಿದ್ದಾರೆ. ಜೊತೆಗೆ ಮತಾಂತರ ಕೃತ್ಯಗಳಲ್ಲಿಯೂ ಶಾಮೀಲಾಗಿದ್ದಾರೆ. ಆದರೆ ಹಿಂದೂಗಳಿಗೆ ಇಂತಹ ವಿಷಯಗಳೇ ಅಪರಿಚಿತವಾಗಿದೆ. ಕ್ರೈಸ್ತರು ಶಾಲೆ,ಕಾಲೇಜು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ ಜೊತೆಗೆ ಮತಾಂತರವನ್ನೂ ಮಾಡಿಸುತ್ತಿದ್ದಾರೆ" ಎಂದು ರಾಮ್ ದೇವ್ ಆರೋಪಿಸಿದ್ದಾರೆಎಂದು ಮೂಲಗಳು ತಿಳಿಸಿವೆ.

    "ನಾವು ಉಚಿತವಾಗಿ ಯೋಗವನ್ನು ಕಲಿಸುತ್ತೇವೆ. ಇತರ ಅನೇಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಾವು ಯಾರನ್ನೂ ಮತಾಂತರ ಮಾಡಿಲ್ಲ. ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತೇವೆ" ಎಂದು ರಾಮ್‌ದೇವ್ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಕಂಪೆನಿಯಾದ ಪತಂಜಲಿಯ ಉತ್ಪನ್ನಗಳ ಪ್ರಚಾರವನ್ನು ಮಾಡಿದ್ದು, ಇದರಲ್ಲಿ ಸಿಗುವ ಆದಾಯವನ್ನು ಚ್ಯಾರಿಟಿ ಕಾರ್ಯಗಳಿಗೆ ಬಳಸುತ್ತಿದ್ದೇನೆ ಎಂದು ತಿಳಿಸಿದರೆಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News