ಗುಜರಾತ್ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಆನಂದಿಬೆನ್ ಪಟೇಲ್
Update: 2016-08-03 23:36 IST
ಹೊಸದಿಲ್ಲಿ,ಆ.3: ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಬುಧವಾರ ರಾಜ್ಯಪಾಲ ಒ.ಪಿ. ಕೊಹ್ಲಿ ಅವರಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದರು.
ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಪಟೇಲ್ ಹುದ್ದೆಯನ್ನು ತೊರೆಯುವ ತನ್ನ ನಿರ್ಧಾರವನ್ನು ಸೋಮವಾರ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಶೀಘ್ರವೇ ತನಗೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ನೂತನ ನಾಯಕತ್ವಕ್ಕೆ ಇದು ಸಕಾಲವಾಗಿದೆ ಎಂದು ಅವರು ಹೇಳಿದ್ದರು.
ಇಂದು ದಿಲ್ಲಿಯಲ್ಲಿ ಸಭೆ ಸೇರಿದ ಬಿಜೆಪಿ ಸಂಸದೀಯ ಮಂಡಳಿಯು ಪಟೇಲ್ ರಾಜೀನಾಮೆಯನ್ನು ಅಂಗೀ ಕರಿಸಿದೆ. ನೂತನ ಮುಖ್ಯಮಂತ್ರಿ ಆಯ್ಕೆಯ ಅಧಿಕಾರವನ್ನು ಪಕ್ಷಾಧ್ಯಕ್ಷ ಅಮಿತ್ ಶಾ ಅವರಿಗೆ ನೀಡಲಾಗಿದೆ.
ಗುರುವಾರ ಗುಜರಾತ್‌ಗೆ ತೆರಳಲಿರುವ ಶಾ ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.