×
Ad

ಗಲ್ಫ್‌ನಲ್ಲಿ ಕೆಲಸಕಳಕೊಂಡವರಿಗೆ ಅಲ್ಲಿಯೇ ಕೆಲಸ ಸಾಧ್ಯತೆ ಕಂಡು ಹುಡುಕಬೇಕು: ಉಮ್ಮನ್‌ಚಾಂಡಿ

Update: 2016-08-04 13:33 IST

ತಿರುವನಂತಪುರಂ,ಆಗಸ್ಟ್ 4: ಸೌದಿಅರೇಬಿಯ, ಯಮನ್‌ಗಳಲ್ಲಿ ಕೆಲಸ ಕಳಕೊಂಡವರಿಗೆ ಗಲ್ಫ್‌ನಲ್ಲಿಯೇ ಕೆಲಸ ಲಭಿಸುವ ಸಾಧ್ಯತೆಗಳನ್ನು ಹುಡುಕಬೇಕಾಗಿದೆ ಎಂದು ಕೇರಳದ ಮಾಜಿಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಇದಕ್ಕಾಗಿ ಗಲ್ಫ್ ವಲಯದ ಭಾರತೀಯ ಉದ್ಯಮಿಗಳ ಸಭೆಯನ್ನು ಕೇಂದ್ರ ಸಚಿವರು ಕರೆಯಬೇಕು ಎಂದು ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ಗೆ ಬರೆದ ಪತ್ರದಲ್ಲಿ ಚಾಂಡಿ ಆಗ್ರಹಿಸಿರುವುದಾಗಿ ವರದಿಯಾಗಿದೆ. ಕೇರಳ ಮೂಲದ ಉದ್ಯಮಿಗಳಾದ ಎಂ.ಎ.ಯೂಸುಫಲಿ, ರವಿಪಿಳ್ಳೆ, ಸಿ.ಕೆ.ಮೆನನ್ ಮುಂತಾದರವರು ಗಲ್ಫ್‌ನಲ್ಲಿ ಉದ್ಯೋಗ ಕಳಕೊಂಡವರಿಗೆ ನೆರವಾಗಲು ಸಮ್ಮತಿಸಿದ್ದಾರೆ. ಒಮನ್‌ನ ಖಾಸಗಿ ಕ್ಷೇತ್ರದ ಆಸ್ಪತ್ರೆಗಳಲ್ಲಿ ಕೇರಳದ ದಾದಿಯರಿಗೆ ಕೆಲಸ ಸಿಗುವಂತೆ ಮಾಡಲೂ ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಕೆಲಸ ಕಳಕೊಂಡು ಸೌದಿಯಲ್ಲಿ ಕ್ಯಾಂಪ್‌ಗಳಲ್ಲಿ ಇರುವವರಿಗೆ ಆಹಾರ ಔಷಧ ಮತ್ತುಇತರ ಸೌಕರ್ಯಗಳು ಲಭಿಸುವಂತೆ ನೋಡಿಕೊಳ್ಳಬೇಕು. ಕೆಲಸ ಕಳಕೊಂಡವರಿಗೆ ಬೇರೆ ಸ್ಪೋನ್ಸರ್ ಅಧೀನದಲ್ಲಿ ಕೆಲಸ ಮಾಡಲಿರುವ ಅಡೆತಡೆಗಳನ್ನು ನಿವಾರಿಸಲು ಶ್ರಮಿಸಬೇಕೆಂದು ಚಾಂಡಿವಿದೇಶ ಸಚಿವೆಯೊಂದಿಗೆ ವಿನಂತಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News