×
Ad

‘‘ನಮ್ಮನ್ನು ಫುಟ್ ಬಾಲ್ ನಂತೆ ಬಡಿಯಲಾಯಿತು’’

Update: 2016-08-06 14:13 IST

ಕಾನ್ಪುರ,ಆ.6 : ‘‘ನಮ್ಮನ್ನು ಫುಟ್ ಬಾಲ್ ನಂತೆ ಬಡಿಯಲಾಯಿತು. ಒಂದೋ ತಪ್ಪನ್ನು ಒಪ್ಪಿಕೋ, ಇಲ್ಲವೇ ನಿನ್ನ ಸಹೋದರನನ್ನು ಕೊಂದು ಬಿಡುತ್ತೇವೆ,’’ ಎಂದುಪೊಲೀಸರು ಬೆದರಿಸಿದ್ದಾರೆಂದು ಕಾನ್ಪುರದ ಪೊಲೀಸ್ ಔಟ್ ಪೋಸ್ಟ್ ಒಂದರಲ್ಲಿ ಕಸ್ಟಡಿಯಲ್ಲಿ ಬಲಿಯಾದ ದಲಿತ ಯುವಕ 25 ವರ್ಷದ ಕಮಲ್ ವಾಲ್ಮೀಕಿಯ ಕಿರಿಯ ಸಹೋದರ ನಿರ್ಮಲ್ ವಿವರಿಸುತ್ತಾನೆ.

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಮಲ್ ಹಾಗೂ ನಿರ್ಮಲ್ ಅವರನ್ನು ಠಾಣೆಗೆ ಬರ ಹೇಳಲಾಗಿತ್ತು. ಆದರೆ ಕಮಲ್ ದೇಹಗುರುವಾರ ಬೆಳಗ್ಗೆ ಲಾಕಪ್ ನಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾದನಂತರ ನಿರ್ಮಲ್ ನನ್ನು ಮನೆಗೆ ಹೋಗಲು ಬಿಡಲಾಗಿತ್ತು.ಕಮಲ್ ಗೆ ಪೊಲೀಸರಿಂದ ಬಿದ್ದ ಹೊಡೆತಗಳಿಂದಲೇಆತನ ಸಾವು ಸಂಭವಿಸಿದೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದದ್ದಾರೆ. ಕಮಲ್ ಹಾಗೂ ನಿರ್ಮಲ್ ರನ್ನು ಮನೆಯಿಂದ ಕರೆದುಕೊಂಡು ಹೋದ ಪೊಲೀಸ್ ಪೇದೆ ಜನಾರ್ದನ್ ಈಗ ಕೊಲೆ ಪ್ರಕರಣ ಎದುರಿಸುತ್ತಿದ್ದಾರೆ.

‘‘ಈಗ ನನ್ನ ಇತರ ಪುತ್ರರು ಸುರಕ್ಷಿತವಾಗಿದ್ದರೆ ಸಾಕು. ನಾವು ಬಡವರು. ಪೊಲೀಸರೆದುರು ನಾವು ಹೇಗೆ ಹೋರಾಡಬಹುದು?’’ಎಂದು ಅಳುತ್ತಾ ಪ್ರಶ್ನಿಸುತ್ತಾರೆ ಯುವಕರ ತಂದೆಯಾದ ಕಿಶನ್ ವಾಲ್ಮೀಕಿ.

ತರುವಾಯ ಸಂಶಯಾಸ್ಪದ ನಡವಳಿಕೆಯೊಂದರಲ್ಲಿ ಪೊಲೀಸರು ಕಮಲ್ ವಾಲ್ಮೀಕಿಯ ಕಳೇಬರವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸುವಾಗ ರಾಜು ಮಿಸ್ತ್ರಿ ಎಂಬ ಹೆಸರು ನೀಡಿದ್ದಾರೆ. ಇದೊಂದು ಪ್ರಮಾದವೆಂದು ಪೊಲೀಸರು ಒಪ್ಪಿಕೊಂಡಿದ್ದರಾದರೂರಾಜು ಮಿಸ್ತ್ರಿಯೆಂಬ ಯುವಕ ಕಾಣೆಯಾಗಿದ್ದು ಆತನಿಗಾಗಿಯೂ ಹುಡುಕಾಟ ನಡೆಯುತ್ತಿದೆ.

ಠಾಣೆಯಲ್ಲಿದ್ದ ಆರೋಪಿಯೊಬ್ಬ ಅಷ್ಟೆಲ್ಲಾ ಪೊಲೀಸರಿರುವಾಗ ಹೇಗೆ ಆತ್ಮಹತ್ಯೆ ಮಾಡಿಕೊಂಡ ಹಾಗೂ ಆತನಿಗೆ ಆತ್ಮಹತ್ಯೆಗೈಯ್ಯಲು ಹಗ್ಗ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ.

ತರುವಾಯ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದಮಾಜಿ ಮುಖ್ಯಮಂತ್ರಿ ಮಾಯಾವತಿ ‘‘ದಲಿತನೊಬ್ಬ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಕೇವಲ ಪೊಲೀಸರನ್ನು ಸಸ್ಪೆಂಡ್ ಮಾಡಿದರೆ ಸಾಲದು,’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News