ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ; ಕರ್ನಾಟಕದ ಓರ್ವ ಯಾತ್ರಿಕ ಸೇರಿದಂತೆ ನಾಲ್ವರು ಬಲಿ

Update: 2016-08-06 11:19 GMT

ಶ್ರೀನಗರ, ಆ.6:  ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ  ಭೂಕುಸಿತ ಉಂಟಾದ ಪರಿಣಾಮವಾಗಿ ಕರ್ನಾಟಕದ ಓರ್ವ ಯಾತ್ರಿಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ.
ಮಧ್ಯರಾತ್ರಿ ಬಂಗಾಂಗ -ಆರ್ಧುಕುವಾರಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಯಾತ್ರಿಕರು ತಂಗಿದ್ದ ಮನೆಯ ಮೇಲೆ  ಮಣ್ಣು ಬಿದ್ದ ಪರಿಣಾಮವಾಗಿ ಕರ್ನಾಟಕದ ಯಾತ್ರಿಕ 29ರ ಹರೆಯದ ಶಶಿಧರ್‌ ಕುಮಾರ್‌ ಬೆಂಗಳೂರು, ಚಂಡೀಗಢದ ಬಿಂದು ಸಾಹ್ನಿ , ಆಕೆಯ ಐದರ ಹರೆಯದ ಪುತ್ರ ವಿಶಾಲ್‌  ಮತ್ತು ಸ್ಥಳೀಯ ನಿವಾಸಿ ರಿಯಾಸಿಯ ಸಾದಿಕ್‌ ಎಂಬವರು ಮೃತಪಟ್ಟರು.
ಈ ದುರ್ಘಟನೆಯಲ್ಲಿ 9 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಟಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಿಯಾಸಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಂಜಯ್‌ ರಾಣಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News