ಸಮಾನ ನಾಗರಿಕ ಸಂಹಿತೆ: ಸಂಸತ್‌ನಲ್ಲಿ ಕಟುವಾಗಿ ವಿಮರ್ಶಿಸಿದ ಕೇರಳ ಸಂಸದ

Update: 2016-08-06 09:52 GMT

   ಹೊಸದಿಲ್ಲಿ, ಆ.6: ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಮೋದಿ ಸರಕಾರದ ಕ್ರಮವನ್ನು ವಿರೋಧಿಸಿ ಸಾರ್ವಜನಿಕ ಸಮಾಜ ಒಗ್ಗಟ್ಟಾಗಿ ರಂಗಕ್ಕಿಳಿಯಬೇಕೆಂದು ಲೋಕಸಭೆಯಲ್ಲಿ ಕೇರಳದ ಸಂಸದ ಎಂ.ಐ. ಶಾನವಾರ್ ಆಗ್ರಹಿಸಿದ್ದಾರೆ. ಇಸ್ಲಾಮಿಕ್ ಶರೀಅತ್‌ಗೆ ಧ್ವಂಸಮಾಡುವ ಷಡ್ಯಂತ್ರವಿದು. ಸಂವಿಧಾನದ 25ನೆ ಪರಿಚ್ಛೇದ ನೀಡುವ ಭರವಸೆಗೆ ವಿರುದ್ಧವಾದ ನಿಲುವನ್ನು ಕೇಂದ್ರ ಸರಕಾರ ಸ್ವೀಕರಿಸಬಾರದೆಂದು ಸಂಸದ ಶಾನವಾರ್ ಹೇಳಿದ್ದಾರೆ. ಕೇಂದ್ರ ಸರಕಾರ ಸಮಾನ ನಾಗರಿಕ ಸಂಹಿತೆ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯದಿಂದ ವ್ಯವಹರಿಸುತ್ತಿದೆ ಎಂದು ಅವರು ಲೋಕಸಭೆಯಲ್ಲಿ ಆರೋಪಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News