ಸುನಂದಾ ಮೃತ್ಯು ಪ್ರಕರಣ: ಅವಯವಗಳನ್ನು ತರಲು ದಿಲ್ಲಿಪೊಲೀಸರು ಅಮೆರಿಕಕ್ಕೆ!

Update: 2016-08-06 10:01 GMT

 ಹೊಸದಿಲ್ಲಿ, ಆಗಸ್ಟ್ 6: ಶಶಿ ತರೂರ್‌ರ ಪತ್ನಿ ಸುನಂದಾ ಪುಷ್ಕರ್‌ರ ಪರೀಕ್ಷೆಗೆ ಕಳುಹಿಸಲಾದ ಆಂತರಿಕ ಅವಯವಗಳನ್ನು ಮರಳಿ ತರಲಿಕ್ಕಾಗಿ ದಿಲ್ಲಿ ಪೊಲೀಸರು ಅಮೆರಿಕಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ. ಒಂದು ವರ್ಷ ಮೊದಲು ಕಳುಹಿಸಿದ್ದ ಸ್ಯಾಂಪಲ್‌ನ ಪರೀಕ್ಷಾ ಫಲಿತಾಂಶ ಸಿಕ್ಕಿದ್ದರೂ ಸ್ಯಾಂಪಲ್‌ಗಳನ್ನು ಮರಳಿ ಪಡೆದಿರಲಿಲ್ಲ. ಎಫ್‌ಬಿಐ ಲ್ಯಾಬ್ ಅಧಿಕಾರಿಗಳು ನಿರ್ದೇಶ ಪ್ರಕಾರ ಆಂತರಿಕ ಅವಯವಗಳಸ್ಯಾಂಪಲ್‌ಗಳನ್ನು ಮರಳಿ ತರಲು ನಿರ್ಧರಿಸಲಾಯಿತು ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.

    ಅದೇ ವೇಳೆ ಎಫ್‌ಬಿಐ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾದರೂ ಪೊಲೀಸರಿಗೆ ಸುನಂದಾರ ಸಾವಿನ ಸುತ್ತ ಸೃಷ್ಟಿಯಾದ ನಿಗೂಢತೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ನಂತರ ಪೊಲೊನಿಯಂ 210ನಂತಹ ಮಾರಕ ವಿಷವನ್ನು ಚುಚ್ಚಿ ಸುನಂದಾರ ಹತ್ಯೆ ನಡೆಸಲಾಗಿದೆ ಎಂದು ಕೇಸು ದಾಖಲಿಸಿಕೊಳ್ಳಲಾಗಿತ್ತು. ಆದರೆ ಎಫ್‌ಬಿಐ ಲ್ಯಾಬ್ ಪರೀಕ್ಷೆಯಲ್ಲಿ ಪೊಲೋನಿಯಂ ಅಂಶ ಪತ್ತೆಯಾಗಿರಲಿಲ್ಲ.

    ಯಾರನ್ನೂ ಆರೋಪಿಗಳೆಂದು ಹೆಸರಿಸದೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ತಿರೂರ್‌ರ ಮತ್ತು ಇತರರನ್ನು ಹಲವು ಸಲ ಪ್ರಶ್ನಿಸಲಾಗಿತ್ತು. ಸರಿಯಾದ ಯಾವುದೇ ಪುರಾವೆಯೂ ಪೊಲೀಸರಿಗೆ ಲಭಿಸಲಿಲ್ಲ. ತನಿಖೆಯ ಹಾದಿ ನಿಗೂಢವಾದ್ದರಿಂದ ತನಿಖೆಯನ್ನು ಸ್ಥಗಿತಗೊಳಿಸಲು ದಿಲ್ಲಿಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News