ಯೂಸುಫಲಿಗೆ ಗಾಂಧಿ ಸಮ್ಮಾನ್ ಪ್ರಶಸ್ತಿ
ತಿರುವನಂತಪುರಂ,ಆ.7: ಅನಿವಾಸಿ ಭಾರತೀಯರಿಗಿರುವ ಪತ್ತನಾಪುರಂ ಗಾಂಧಿಭವನ್ ನೀಡುತ್ತಿರುವ ಮಹಾತ್ಮಾಗಾಂಧಿ ಸಮ್ಮಾನ್ ಪ್ರಶಸ್ತಿಗೆ ಪ್ರಮುಖ ಉದ್ಯಮಿ ಎಂ.ಐ. ಯೂಸುಫಲಿ ಭಾಜನರಾಗಿದ್ದಾರೆಎಂದು ವರದಿಯಾಗಿದೆ. ಪ್ರಶಸ್ತಿ 51,000 ರೂಪಾಯಿನಗದು ಮತ್ತು ಫಲಕಗಳನ್ನು ಹೊಂದಿದೆ.
ಸಮಾಜಸೇವೆ ಮತ್ತು ಉದ್ಯೋಗ ಅವಕಾಶಗಳನ್ನು ಸಮಾಜಕ್ಕೆ ಒದಗಿಸುತ್ತಿರುವ ವ್ಯಕ್ತಿಗಳಿಗೆ ಗಾಂಧಿ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆಗಸ್ಟ್ 20ರಂದು ಮಧ್ಯಾಹ್ನ 2:30ಕ್ಕೆ ಪತ್ತನಾಪುರಂ ಗಾಂಧಿಭವನ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯೂಸುಫಲಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಯೂಸುಫಲಿಗೆ ಪ್ರಶಸ್ತಿ ನೀಡಲಾಗುವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಪ್ರಶಸ್ತಿ ನಿರ್ಣಯ ಸಮಿತಿ ಮಾಹಿತಿ ನೀಡಿದೆ. ಸಮಿತಿಯ ಅಧ್ಯಕ್ಷರೂ ಮಾಜಿ ಪ್ರಧಾನಮಂತ್ರಿಯ ಪ್ರಿನ್ಸಿಪಲ್ ಸೆಕ್ರಟರಿಯೂ ಆದ ಟಿ,ಕೆ.ಐ. ನಾಯರ್, ಸಮಿತಿಸದಸ್ಯರಾದ ಪಿ.ಆರ್.ಡಿಯ ಮಾಜಿ ನಿರ್ದೇಶಕರಾದ ಜಿ.ಎನ್.ಪಣಿಕ್ಕರ್, ಗಾಂಧಿಭವನ್ ಕಾರ್ಯದರ್ಶಿ ಡಾ.ಪುನಲ್ಲೂರ್ ಸೋಮರಾಜನ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.