ಆರೆಸ್ಸೆಸ್ ನಾಯಕ ಜಗದೀಶ್ ಗಗ್ನೇಜಾರನ್ನು ಗುಂಡು ಹಾರಿಸಿ ಕೊಲೆಗೆ ಯತ್ನ
Update: 2016-08-07 12:20 IST
ಜಲಂಧರ್ , ಆ.7: ಪಂಜಾಬ್ ನ ಆರೆಸ್ಸೆಸ್ ನಾಯಕ ಬ್ರಿಗೇಡಿಯರ್ (ನಿವೃತ್ತ.) ಜಗದೀಶ್ ಗಗ್ನೇಜ ಎಂಬವರನ್ನು ಗುಂಡು ಹಾರಿಸಿ ಕೊಲೆಗೆ ಯತ್ನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಜಗದೀಶ್ ಅವರ ಮೇಲೆ ಬೈಕ್ ನಲ್ಲಿ ಬಂದ ತಂಡ ಗುಂಡು ಹಾರಿಸಿ ಪರಾರಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಶ್ ಅವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ಪಟೇಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಜ್ಯೋತಿ ರೆಡ್ ಕ್ರಾಸ್ ಮಾರುಕಟ್ಟೆ ಹತ್ತಿರದ ಚೌಕ್ ಬಳಿ ನಿಂತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.