ಯುಡಿಎಫ್‌ನಿಂದ ಹೊರಗೆ ಕಾಲಿಟ್ಟ ಮಾಣಿ ಕಾಂಗ್ರೆಸ್?
ಚರಲ್‌ಕುನ್ನ್(ಪತ್ತನಂತಿಟ್ಟ), ಆಗಸ್ಟ್ 7: ಕೇರಳ ಕಾಂಗ್ರೆಸ್ ಎಂ ಶಾಸಕರು ವಿಧಾನಸಭೆಯಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕೆಂದು ಕೇರಳ ಕಾಂಗ್ರೆಸ್ ಎಂ ನಾಯಕರ ಸಭೆಯಲ್ಲಿ ಪ್ರಸ್ತಾವ ಅಂಗೀಕರಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಬಿಜೆಪಿಯೊಂದಿಗೆ ಮೈತ್ರಿಇಲ್ಲ. ಅದು ಸಭೆಯಲ್ಲಿ ಚರ್ಚೆಗೂ ಬಂದಿಲ್ಲ. ಎಂದು ಜೋಸ್.ಕೆ. ಮಾಣಿ ಹೇಳಿದ್ದಾರೆ ಹಾಗೂ ಬಾರ್‌ಹಗರಣವನ್ನು ಬಿಗಡಾಯಿಸುವಂತೆ ಮಾಡಿದ ರಮೇಶ್ ಚೆನ್ನಿತ್ತಲರ ವಿರುದ್ಧ ಸಭೆಯಲ್ಲಿ ತೀವ್ರ ಆಕ್ಷೇಪಗಳು ಕೇಳಿಬಂದಿವೆ ಎಂದು ತಿಳಿದು ಬಂದಿದೆ.
ವಿಧಾನಸಭೆಯಲ್ಲಿ ಮಾಣಿಕಾಂಗ್ರೆಸ್ ಶಾಸಕರು ಪ್ರತ್ಯೇಕವಾಗಿ ಕುಳಿತುಕೊಳ್ಳಲಿದ್ದಾರೆ. ಅದೇವೇಳೆ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಈಗಿನ ಸ್ಥಿತಿಯೇ ಮುಂದುವರಿಯಲಿದೆ ಎಂದು ಪ್ರಸ್ತಾವದಲ್ಲಿದೆ. ಎನ್‌ಡಿಎಯೊಂದಿಗೆ ಸಂಬಂಧ ಸ್ಥಾಪಿಸುವುದು ಕೇರಳ ಕಾಂಗ್ರೆಸ್ ಎಂಗೆ ಅನಾನುಕೂಲವಾಗಬಹುದು ಎಂದು ಪಕ್ಷದ ಮೂರು ಜಿಲ್ಲಾ ಸಮಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೇರಳ ಕಾಂಗ್ರೆಸ್ ಎಂನ ಕಾಲೆಳೆದಿದೆ. ತಿರುವಲ್ಲ, ಎಟ್ಟುಮಾನ್ನೂರ್ಮತ್ತು ಪೂಂಞಾಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಕೇರಳ ಕಾಂಗ್ರೆಸ್‌ಎಂನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ ಎಂದು ಸಭೆಯಲ್ಲಿ ಆರೋಪಿಸಲಾಗಿದೆ.
ಪೂಂಞಾಲ್ ನಲ್ಲಿ ಪಿ.ಸಿ. ಜಾರ್ಜ್‌ಗಾಗಿ ರಮೇಶ್ ಚೆನ್ನಿತ್ತಲ ಕೆಲಸ ಮಾಡಿದ್ದಾರೆ. ಜಾರ್ಜ್‌ರ ಗೆಲುವಿಗೆ ಹಣ ಹರಿಸಲಾಗಿದೆ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೂಡ ಜೋಸ್.ಕೆ. ಮಾಣಿಯನ್ನು ಸೋಲಿಸಲು ಕಾಂಗ್ರೆಸ್ ಕೆಲಸ ಮಾಡಿತ್ತೆಂದೂ ಸಭೆಯಲ್ಲಿ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಮತ್ತು ಎಡ ಪಕ್ಷಗಳೊಂದಿಗೆ ಸಮಾನ ಅಂತರವನ್ನು ಕಾಯ್ದುಕೊಳ್ಳಲಾಗುವುದು ಎಂದು ನಿನ್ನೆ ಘೋಷಿಸಲಾಗಿತ್ತು. ಯುಡಿಎಫ್‌ನಿಂದ ಹೊರಹೋಗುತ್ತಿರುವುದಾಗಿ ಕೆ.ಎಂ.ಮಾಣಿ ಪಕ್ಷದ ನಿರ್ಧಾರವನ್ನು ತಿಳಿಸಿದ್ದಲ್ಲದೆ ಕಾಂಗ್ರೆಸ್‌ನ್ನು ಕಟುವಾಗಿ ಟೀಕಿಸಿದ್ದರು. ಯುಡಿಎಫ್‌ನಲ್ಲಿ ಮುಂದುವರಿಯುವ ಕುರಿತ ಅಂತಿಮ ತೀರ್ಮಾನವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅವರು ನಿನ್ನೆ ಘೋಷಿಸಿದ್ದರೆಂದು ವರದಿ ತಿಳಿಸಿದೆ.