ವಿಮಾನ ತಪ್ಪುತ್ತದೆ ಎಂದು ಅರಿವಾದಾಗ ಈತ ಮಾಡಿದ್ದೇನು ?
ಮ್ಯಾಡ್ರಿಡ್ , ಆ. 11 : ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈತ ವಿಮಾನ ನಿಲ್ದಾಣದ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೋರಿ ವಿಮಾನವೊಂದರ ಹಿಂದೆ ರನ್ ವೇ ನಲ್ಲಿ ಓಡಿ ಕೊನೆಗೂ ವಿಮಾನದೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಇಲ್ಲಿನ ಅಡೋಲಫೋ ಸುಆರೆಜ್ಹ್ ಮ್ಯಾಡ್ರಿಡ್ ಬರಜಸ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅಗ್ನಿ ದುರಂತದಲ್ಲಿ ಹೊರ ಹೋಗುವ ದ್ವಾರದ ಮೂಲಕ ಹೋಗಿ, ಆತನ ಬ್ಯಾಗ್ ಜೊತೆ ರಯಾನ್ ಏರ್ ವಿಮಾನವನ್ನು ಹಿಂಬಾಲಿಸುವ ವೀಡಿಯೋವೊಂದು ಬಹಿರಂಗವಾಗಿದೆ. ಇದನ್ನು ನಿಲ್ದಾಣದ ಸಿಬ್ಬಂದಿಯೊಬ್ಬರು ರೆಕಾರ್ಡ್ ಮಾಡಿದ್ದರು. ಈ ಘಟನೆ ಆಗಸ್ಟ್ ೫ ರಂದು ನಡೆದಿದೆ ಎಂದು ಹೇಳಲಾಗಿದೆ.
ತಡವಾಗಿ ಬಂದು ವಿಮಾನ ತಪ್ಪುವ ಪರಿಸ್ಥಿತಿ ಉಂಟಾದ್ದರಿಂದ ಈತ ಹೀಗೆ ಮಾಡಿದ್ದ ಎಂದು ಹೇಳಲಾಗಿದೆ. ವಿಮಾನ ಏರಿ ಸ್ಪೇನ್ ನ ಕೆನರಿಯ ದ್ವೀಪದಲ್ಲಿ ಇಳಿದ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತನಿಗೆ ಯಾವುದೇ ಭಯೋತ್ಪಾದಕ ಉದ್ದೇಶ ಇರಲಿಲ್ಲ ಎಂದು ಖಚಿತವಾದ ಬಳಿಕ ಆತನನ್ನು ಬಿಡುಗಡೆ ಮಾಡಲಾಯಿತು. ಆದರೂ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಕ್ಕೆ ಆತನಿಗೆ ಶಿಕ್ಷೆಯಾಗಲಿದೆ ಎಂದು ಹೇಳಲಾಗಿದೆ. ಆತನ ಹೆಸರನ್ನು ಗೌಪ್ಯವಾಗಿಡಲಾಗಿದೆ.
Courtesy :hindustantimes.com