ಅತ್ಯಂತ ದುಬಾರಿ ಸೆಲ್ಫಿ
Update: 2016-08-11 14:55 IST
ಸಾಂದರ್ಭಿಕ ಚಿತ್ರ
ಲುಧಿಯಾನ, ಆ.11: ಸೆಲ್ಫಿ ತೆಗೆಯುವ ಗೀಳು ಮಹಿಳೆಯೊಬ್ಬಳಿಗೆ ದುಬಾರಿಯಾದ ಘಟನೆಯೊಂದು ಚಂಡೀಗಢ ರಸ್ತೆ ಪಕ್ಕದಲ್ಲಿನ ಮೋಹಿನಿ ರಿಸಾರ್ಟ್ಸ್ ನಲ್ಲಿ ಆಯೋಜಿಸಲಾದ ಮದುವೆ ಸಮಾರಂಭವೊಂದರಲ್ಲಿ ನಡೆದಿದೆ.
ನೀಲಂ ಎಂಬ ಯುವತಿ ಮದುವೆ ಮಂಟಪದಲ್ಲಿ ವಧುವಿನ ಹತ್ತಿರ ಚಿನ್ನ ಹಾಗೂ ನಗದು ಹಣವಿದ್ದ ಬ್ಯಾಗೊಂದನ್ನು ಪಕ್ಕದಲ್ಲಿರಿಸಿಕೊಂಡು ಕುಳಿತಿದ್ದಳು. ಆದರೆ ಸೆಲ್ಫಿ ತೆಗೆಯುವಾಗ ಆಕೆ ಈ ಬ್ಯಾಗನ್ನು ಪಕ್ಕದ ಕುರ್ಚಿಯೊಂದರಲ್ಲಿರಿಸಿ ಫೋಟೋ ತೆಗೆಯುವುದರಲ್ಲೇ ಮಗ್ನಳಾಗಿಬಿಟ್ಟಿದ್ದಳು. ಆಕೆ ಮತ್ತೆ ನೋಡುವಾಗ ಒಟ್ಟು ಸುಮಾರು ರೂ.8 ಲಕ್ಷ ಮೌಲ್ಯದ ಒಡವೆ ಹಾಗೂ ರೂ.1,500 ನಗದು ಇದ್ದ ಬ್ಯಾಗ್ ಕಾಣೆಯಾಗಿತ್ತು. ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ 11 ವರ್ಷದ ಬಾಲಕ ಬ್ಯಾಗನ್ನು ಎಗರಿಸುವ ಒ ದಾಖಲಾಗಿದೆ.
ಬ್ಯಾಗಿನಲ್ಲಿ ಸುಮಾರು 40 ಗ್ರಾಂ ತೂಕದ ಚಿನ್ನಾಭರಣವಿತ್ತೆನ್ನಲಾಗಿದೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.