ಇ-ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ರೂಪಿಸಲು ಕೇಂದ್ರಕ್ಕೆ ಸಂಸದೀಯ ಸಮಿತಿ ಸೂಚನೆ

Update: 2016-08-11 15:36 GMT

ಹೊಸದಿಲ್ಲಿ,ಆ.11: ಇ-ತ್ಯಾಜ್ಯ ವಿಲೇವಾರಿಗೆ ಪರಿಣಾಮಕಾರಿ ವ್ಯವಸ್ಥೆಯ ಕೊರತೆಯ ಬಗ್ಗೆ ಕಳವಳಗೊಂಡಿರುವ ಸಂಸದೀಯ ಸಮಿತಿಯೊಂದು, ಇಂತಹ ತ್ಯಾಜ್ಯಗಳನ್ನು ಕೇಂದ್ರ ಪ್ರಾಧಿಕಾರವೊಂದರ ನಿಯೋಜಿತ ಸಂಗ್ರಹ ಕೇಂದ್ರಗಳಿಗೆ ತಲುಪಿಸುವುದನ್ನು ಕಡ್ಡಾಯಗೊಳಿಸಲು ಪ್ರತ್ಯೇಕ ಶಾಸನವೊಂದನ್ನು ತರುವಂತೆ ಸರಕಾರಕ್ಕೆ ಸೂಚಿಸಿದೆ.
 ದಿಲೀಪಕುಮಾರ್ ಮನ್ಸುಖಲಾಲ್ ಗಾಂಧಿ ಅಧ್ಯಕ್ಷತೆಯ ಅಧೀನ ಶಾಸನಗಳ (2015-16) ಸಮಿತಿಯು ಇ-ತ್ಯಾಜ್ಯ ನಿರ್ವಹಣೆಯ ನಿಯಮಗಳ ಕುರಿತ ತನ್ನ 15ನೇ ವರದಿಯನ್ನು ಇತ್ತೀಚಿಗೆ ಲೋಕಸಭೆಯಲ್ಲಿ ಮಂಡಿಸಿದೆ.
ಪರಿಸರ ಸಂರಕ್ಷಣೆ ಕಾಯ್ದೆ 1986ರಡಿ ಇ-ತ್ಯಾಜ್ಯ ನಿರ್ವಹಣೆಯ ಪ್ರಸಕ್ತ ವ್ಯವಸ್ಥೆ ಮತ್ತು ಅದರಡಿ ರೂಪಿಸಲಾಗಿರುವ ನಿಯಮಗಳು ಯಾವುದೇ ಗಮನಾರ್ಹ ಫಲಿತಾಂಶಗಳನ್ನು ನೀಡುವಲ್ಲಿ ವಿಫಲಗೊಂಡಿವೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News