ಕೇರಳ: ಸಿನೆಮಾ ನಟ ಸಾಗರ್ ಶಿಯಾಸ್ ನಿಧನ
Update: 2016-08-12 12:00 IST
ಮೂವಾಟ್ಟುಪುಝ,ಆ.12: ಮಳೆಯಾಲಂ ಸಿನೆಮಾ ನಟ ಸಾಗರ್ ಶಿಯಾಸ್(50) ನಿಧನರಾಗಿದ್ದಾರೆ. ಕೆಲವು ದಿವಸಗಳಿಂದ ಕರುಳಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಿಮಿಕ್ರಿಯ ಮೂಲಕ ಪ್ರಸಿದ್ಧರಾದ ಅವರು ನಂತರ ಸಿನೆಮಾರಂಗ ಪ್ರವೇಶಿಸಿದ್ದರು. ಮಮ್ಮುಟ್ಟಿ, ಮೋಹನ್‌ಲಾಲ್, ದಿಲೀಪ್, ಮನೋಜ್ ಕೆ.ಜಯನ್ ಸಹಿತ ಹಲವು ಪ್ರಮುಖ ನಟರೊಂದಿಗೆ ಅಭಿನಯಿಸಿರುವ ಅವರು ಸುಮಾರು 75 ಸಿನೆಮಾಗಳಲ್ಲಿ ನಟಿಸಿದ್ದಾರೆ. ಮಾಯಾವಿ, ದುಬಾಯ್,ಜೂನಿಯರ್ ಮಾಂಡ್ರೇಕ್ ಮುಂತಾದ ಸಿನೆಮಾಗಳಲ್ಲಿ ಅವರು ಪ್ರಶಂಸನೀಯ ಅಭಿನಯ ನೀಡಿ ಗಮನ ಸೆಳೆದಿದ್ದರು. ಅಭಿ, ದಿಲೀಪ್, ನಾದಿರ್‌ಶಾ ಜೊತೆ ಮಿಮಿಕ್ರಿ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಅಮರ್‌ಅಕ್ಬರ್ ಅಂತೋನಿ ಅವರ ಅಭಿನಯದ ಕೊನೆಯ ಚಿತ್ರವಾಗಿದೆ. ಶುಕ್ರವಾರ ಸಂಜೆ ಮೂವಾಟ್ಟುಪುಝ ಸೆಂಟ್ರಲ್ ಜುಮಾಮಸೀದಿಯ ಕಬರಸ್ಥಾನದಲ್ಲಿ ಪಾರ್ಥಿವ ದೇಹದ ದಫನ ಕಾರ್ಯ ಜರಗಲಿದೆ ಎಂದು ವರದಿಯಾಗಿದೆ.