ದೇಶದ ಗಮನ ಸೆಳೆದ ಉನಾ (ಗುಜರಾತ್ ) ದಲಿತ ಮಹಾ ಸಮಾವೇಶ
Update: 2016-08-15 12:07 IST
ಉನಾ , ಗುಜರಾತ್ , ಆ. 15 : ಕಿರುಕುಳದಿಂದ ಬೇಸತ್ತು ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರು ಇಂದು ಉನಾದಲ್ಲಿ ನಡೆಯುತ್ತಿರುವ ದಲಿತರ ಮಹಾ ಸಮಾವೇಶದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಅತ್ಯುನ್ನತ ಗೌರವಕ್ಕೆ ಪಾತ್ರರಾದರು. ಸತ್ತ ದನದ ಚರ್ಮ ಸುಲಿದಿದ್ದಕ್ಕೆ ಗೋರಕ್ಷಕರಿಂದ ಭೀಕರವಾಗಿ ನಾಲ್ಕು ಮಂದಿ ದಲಿತರು ಹಲ್ಲೆಗೊಳಗಾದ ಉನಾದಲ್ಲಿ ಇಂದು ನಡೆಯುತ್ತಿರುವ ದಲಿತ ಅಸ್ಮಿತಾ ಯಾತ್ರೆಯ ಸಮಾರೋಪ ಸಮಾರಂಭ ಇಡೀ ದೇಶದ ಗಮನ ಸೆಳೆದಿದೆ. ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.