×
Ad

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಚಿತ್ರೀಕರಿಸುತ್ತಿದ್ದ ದುಷ್ಕರ್ಮಿಯ ಬಂಧನ

Update: 2016-08-15 12:53 IST

ನೆಡುಂಬಶ್ಶೇರಿ, ಆ.15: ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಪ್ರಕರಣದ ಪ್ರಧಾನ ಆರೋಪಿ ಲಕ್ಷದ್ವೀಪದ ಮೂಸಾ(46) ಎಂಬಾತನನ್ನು ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಮಿನಿಕ್ಕೊಯ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

 ಹಡುಗಿನಲ್ಲಿ ಉದ್ಯೋಗಿಯಾಗಿರುವ ಈತನ ವಿರುದ್ಧ ಮಿನಿಕ್ಕೊಯ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ತಕ್ಕಿಂತ ಕೆಳವಯಸ್ಸಿನ ಹೆಣ್ಣುಮಕ್ಕಳನ್ನು ಅನೈಸರ್ಗಿಕ ಲೈಂಗಿಕ ಕಿರುಕುಳಕ್ಕೊಳಪಡಿಸಿ ಅದರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಎಂದು ಮೂಸಾನ ವಿರುದ್ಧ ಆರೋಪವಿದೆ. ಈತ ತಾನು ಚಿತ್ರೀಕರಿಸಿದ ದೃಶ್ಯಗಳನ್ನು ವಿದೇಶಿಗಳಿಗೆ ಮಾರಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆಂದು ವರದಿ ತಿಳಿಸಿದೆ.

   ತನ್ನ ಲಕ್ಷದೀಪದ ಮನೆಯಲ್ಲಿ ಈತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಎಂಟು, ಹತ್ತು ವರ್ಷ ವಯಸ್ಸಿನ ಎಳೆಯ ಹೆಣ್ಣುಮಕ್ಕಳಿಗೆ ಈತ ಲೈಂಗಿಕ ಕಿರುಕುಳ ನೀಡುತ್ತಿರುವಾಗ ಈತನ ಪತ್ನಿ ಅದನ್ನು ವೀಡಿಯೊದಲ್ಲಿ ಚಿತ್ರೀಕರಿಸುತ್ತಿದ್ದಳು ಎನ್ನಲಾಗಿದೆ. ಈತನ ಪತ್ನಿ ನೂರ್‌ಜಹಾನ್ ಎಂಬಾಕೆಯನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಎಳೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ವೀಡಿಯೊ ದೃಶ್ಯಗಳನ್ನು ಮಾರಿ ಹಣ ಸಂಪಾದಿಸುವುದು ಈತನ ಉದ್ದೇಶವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News