×
Ad

ಶ್ರೀನಗರದಲ್ಲಿ ಪೊಲೀಸ್‌ ಠಾಣೆಯ ಮೇಲೆ ಉಗ್ರರ ದಾಳಿ; ಕಮಾಂಡಿಂಗ್‌ ಅಧಿಕಾರಿಯ ಹತ್ಯೆ

Update: 2016-08-15 14:59 IST

ಶ್ರೀನಗರ, ಆ.15: ಇಲ್ಲಿನ ನವಟ್ಟಾದ ಪೊಲೀಸ್‌ ಠಾಣೆಯೊಂದರ ಮೇಲೆ   ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಸಿಆರ್‌ಪಿಎಫ್‌ನ ನಾಲ್ಕನೆ ಬೆಟಾಲಿಯನ್‌ ಅಧಿಕಾರಿ ಪ್ರಮೋದ್‌ ಕುಮಾರ್‌ ಎಂಬವರು ಮೃತಪಟ್ಟಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ  ಮೋದಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಹೊತ್ತಿಗೆ ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಪೊಲೀಸ್‌ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದಾಗ ಅಲ್ಲಿದ್ದ ಗನ್‌ಮ್ಯಾನ್‌ಗಳಿಗೆ ಉಗ್ರರನ್ನು ಸದೆ ಬಡಿಯಲು ಸಾಧ್ಯವಾಗಲಿಲ್ಲ. ಭದ್ರತಾ ಸಿಬಂದಿಗಳ ಮೇಲೆ ಉಗ್ರರು ದಾಳಿ ನಡೆಸಿದರು.ಈ ಪೈಕಿ ಐವರು ಗಾಯಗೊಂಡರು. ಈ ಪೈಕಿ ಗಂಭೀರ ಗಾಯಗೊಂಡ ಕಮಾಂಡಿಂಗ್‌ ಅಧಿಕಾರಿ ಪ್ರಮೋದ್‌ ಕುಮಾರ್‌ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಮೃತಪಟ್ಟರು. ಐವರು ಉಗ್ರರ ಪೈಕಿ ಮೂವರು ಪರಾರಿಯಾಗಿದ್ದಾರೆ.
ಜುಲೈ ೮ರಂದು ಹಿಜ್ಬುಲ್‌ ಮುಜಾಯಿದೀನ್‌ಗೆ ಸೇರಿದ ಉಗ್ರ ಬುರ್ಹಾನ್‌ ವನಿ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಕಂಡು ಬಂದಿತ್ತು. ಹಿಂಸಾಚಾರದಿಂದಾಗಿ ಈ ತನಕ ಐವತ್ತೈದಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News