ನಿಮ್ಮ ವಿಳಾಸದ ಗುಟ್ಟು ಬಿಡಿಸುವ ಪಿನ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

Update: 2016-08-16 06:09 GMT

ಪಿನ್ ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ಅಂದರೇನು? ಅಂಚೆ ಇಲಾಖೆ ಮತ್ತು ಕೊರಿಯರ್ ಕಂಪೆನಿಗಳು ನಿಮಗೆ ವಿಳಾಸದ ಜೊತೆಗೆ ಪಿನ್ ಕೋಡ್ ಬರೆಯಲು ಏಕೆ ಹೇಳುವುದು? ಅದು ಅಷ್ಟು ಪ್ರಾಮುಖ್ಯತೆ ಏಕೆ ಹೊಂದಿದೆ.

ಪಿನ್ ಕೋಡ್

ಪೋಸ್ಟಲ್ ಇಂಡೆಕ್ಸ್ ನಂಬರ್. ಭಾರತೀಯ ಅಂಚೆಗಾಗಿ ಬಳಸುವ 6 ಡಿಜಿಟ್ ಅಂಚೆ ಕಚೇರಿಯ ಕೋಡ್ ಆಗಿದೆ. ಈ ಪಿನ್ ಗಳನ್ನು 1972 ಆಗಸ್ಟ್ 15ರಂದು ಆರಂಭಿಸಲಾಯಿತು. ದೇಶದಲ್ಲಿ 9 ಪಿನ್ ಪ್ರಾಂತ್ಯಗಳಿವೆ. ಮೊದಲ 8 ಭೌಗೋಳಿಕ ಪ್ರಾಂತಗಳು ಮತ್ತು ಡಿಜಿಟ್ 9 ಅನ್ನು ಸೇನೆಯ ಅಂಚೆ ಸೇವೆಗಾಗಿ ಬಳಸಲಾಗುತ್ತಿದೆ. ಮೊದಲ ಡಿಜಿಟ್ ಒಂದು ಪ್ರಾಂತವನ್ನು ಸೂಚಿಸುತ್ತದೆ. ಎರಡನೇ ಡಿಜಿಟ್ ಉಪ ಪ್ರಾಂತವನ್ನು ಅಥವಾ ಅಂಚೆ ವಲಯ (ರಾಜ್ಯ) ಸೂಚಿಸುತ್ತದೆ. ಮೂರನೇ ಡಿಜಿಟ್ ಕಂದಾಯ ಜಿಲ್ಲೆಯನ್ನು ಸೂಚಿಸುತ್ತದೆ. ಕೊನೆಯ 3 ಡಿಜಿಟ್ ಗಳು ಅಂಚೆ ವಿತರಿಸುವ ಅಂಚೆ ಕಚೇರಿಯನ್ನು ಸೂಚಿಸುತ್ತದೆ.

ಮೊದಲ ಡಿಜಿಟ್ ಪಿನ್ ಗಳೆಂದರೆ

1. ಉತ್ತರವಲಯ- ದಿಲ್ಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ

2. ಉತ್ತರ- ಉತ್ತರ ಪ್ರದೇಶ ಮತ್ತು ಉತ್ತರಖಂಡ

3. ಪಶ್ಚಿಮ- ರಾಜಸ್ಥಾನ ಮತ್ತು ಗುಜರಾತ್

4. ಪಶ್ಚಿಮ- ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢ

5. ದಕ್ಷಿಣ- ಆಂಧ್ರಪ್ರದೇಶ ಮತ್ತು ಕರ್ನಾಟಕ

6. ದಕ್ಷಿಣ- ಕೇರಳ ಮತ್ತು ತಮಿಳುನಾಡು

7. ಪೂರ್ವ- ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಈಶಾನ್ಯ

8. ಪೂರ್ವ- ಬಿಹಾರ ಮತ್ತು ಜಾರ್ಖಂಡ್

9. ಎಪಿಎಸ್- ಸೇನಾ ಅಂಚೆ ಸೇವೆ

ಉದಾಹರಣೆಗೆ ಪಿನ್ ಕೋಡ್ 500072 ಎಂದಿದ್ದರೆ 5 ದಕ್ಷಿಣ ರಾಜ್ಯ ಮತ್ತು 50 ತೆಲಂಗಾಣವನ್ನು ಸೂಚಿಸುತ್ತದೆ. 500 ರಂಗರೆಡ್ಡಿ/ ಹೈದರಾಬಾದನ್ನು ತೋರಿಸುತ್ತದೆ. 3 ಡಿಜಿಟ್ ಗಳು ಕೆಪಿಎಚ್‌ಬಿ ಕಾಲನಿ ಅಂಚೆ ಕಚೇರಿಯನ್ನು ತೋರಿಸುತ್ತದೆ. ಅಂಚೆ ಕಚೇರಿಗಳು ತಮ್ಮ ಅಂಚೆಗಳನ್ನು ವಿಭಜಿಸುವ ಸರಳ ರೀತಿಯಿದು.

ಕೃಪೆ:  https://factly.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News