×
Ad

ವಾಯು ಮಾಲಿನ್ಯ ಸಾವು: ಚೀನಾಕ್ಕಿಂತ ಭಾರತವೇ ಮುಂದು

Update: 2016-08-18 20:59 IST

ಬೀಜಿಂಗ್, ಆ. 18: ವಾಯು ಮಾಲಿನ್ಯದಿಂದಾಗಿ ಭಾರತದಲ್ಲಿ ಸಾಯುವವರ ಸಂಖ್ಯೆಯಲ್ಲಿ ಆಗಲಿರುವ ಹೆಚ್ಚಳವು ಚೀನಾದಲ್ಲಿ ಈ ಕಾರಣದಿಂದ ಸಾಯುವವರ ಸಂಖ್ಯೆಯಲ್ಲಿ ಆಗಲಿರುವ ಹೆಚ್ಚಳವನ್ನು ಮೀರಿಸುತ್ತದೆ ಎಂದು ಅಮೆರಿಕದ ಸಂಶೋಧನಾ ತಂಡವೊಂದರ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.
ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಹೆಚ್ಚೆಚ್ಚು ಕಲ್ಲಿದ್ದಲು ಗಣಿಗಳನ್ನು ಸ್ಥಾಪಿಸುವ ಮೂಲಕ ಭಾರತ ತನ್ನ ವಿನಾಶವನ್ನು ತಾನೇ ಮಾಡುತ್ತಿದೆ ಎಂದು ಬಾಸ್ಟನ್‌ನ ಹೆಲ್ತ್ ಇಫೆಕ್ಟ್ಸ್ ಇನ್‌ಸ್ಟಿಟ್ಯೂಟ್ (ಎಚ್‌ಇಐ) ಅಧ್ಯಕ್ಷ ಡಾನ್ ಗ್ರೀನ್‌ಬೌಮ್ ಇಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
‘‘ಭಾರತದ ಪರಿಸ್ಥಿತಿಯು ಚೀನಾಕ್ಕಿಂತ ಹೆಚ್ಚಿನ ವೇಗದಲ್ಲಿ ಹದಗೆಡುತ್ತಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News