×
Ad

ಬಿಹಾರದಲ್ಲಿ ಹದಿನೆಂಟು ಮಂದಿಯ ಸಾವಿಗೆ ಕಾರಣನಾದ ನಕಲಿ ಮದ್ಯ ತಯಾರಕನ ಸೆರೆ

Update: 2016-08-21 11:54 IST

 ಗೋಪಾಲ್‌ ಗಂಜ್‌ , ಆ.21: ಇತ್ತೀಚೆಗೆ ಬಿಹಾರದ ಗೋಪಾಲ್‌ ಗಂಜ್‌ ನಲ್ಲಿ ನಕಲಿ ಮದ್ಯ ಸೇವಿಸಿ ಹದಿನೆಂಟು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ  ನಕಲಿ ಮದ್ಯ ಪೂರೈಕೆ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ನಗಿನಾ ಪಾಸಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು  ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈತನ ಸಹೋದರ ಲಾಲ್‌ ಬಾಬ್‌ ಚೌದರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೌದರಿ ತಲೆಮೆರೆಸಿಕೊಂಡಿದ್ದಾನೆ. ಈತನಿಗಾಗಿ ಶೋಧ ಮುಂದುವರಿದಿದೆ.  ಆರೋಪಿ ನಗಿನಾ ಪಾಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿ ಹದಿನೆಂಟು ಪೊಲೀಸರನ್ನು ಅಮಾನತು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News