×
Ad

4.25 ಲಕ್ಷ ರೂ.ಗೆ ಪುತ್ರಿಯನ್ನು ಮಾರಲೆತ್ನಿಸಿದ ಮಹಿಳೆಯ ಬಂಧನ!

Update: 2016-08-21 12:12 IST

ಥಾಣೆ, ಆಗಸ್ಟ್ 21: ಹದಿಹರೆಯದ ಪುತ್ರಿಯನ್ನು ಸೆಕ್ಸ್ ಮಾರ್ಕೆಟ್‌ಗೆ ಮಾರಲು ಯತ್ನಸಿದ ಆರೋಪದಲ್ಲಿ ಮುಂಬೈ ಸಮೀಪದ ಗೋವಂಡಿ ನಿವಾಸಿಯಾದ 32 ವರ್ಷ ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಸಹೋದರಿಯ ಪುತ್ರಿಯ ವಿವಾಹಕ್ಕೆ ಐದುಲಕ್ಷ ರೂಪಾಯಿ ನೀಡುವ ಸಲುವಾಗಿ ಈ ಮಹಿಳೆ ತನ್ನ ಹದಿನಾರುವರ್ಷ ವಯಸ್ಸಿನ ಪುತ್ರಿಯನ್ನು ಮಾರಲು ಥಾಣೆ ನಗರಕ್ಕೆ ಕರೆತಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಹೊಟೇಲೊಂದರಲ್ಲಿ ವ್ಯವಹಾರ ಕುದುರಿಸಲು ಯತ್ನಿಸುತ್ತಿದ್ದಾಗ ಮಾನವಸಾಗಾಟ ವಿರೋಧಿ ಸಂಘದ ಕೈಗೆ ಸಿಕ್ಕಿಬಿದ್ದಿದ್ದರು ಎಂದು ತಿಳಿದು ಬಂದಿದೆ.

ಈ ಮಹಿಳೆಗೆ ಮೂರು ವಿವಾಹವಾಗಿದ್ದು, ವೇಶ್ಯಾವಾಟಿಕೆಯನ್ನು ಕೂಡಾ ನಡೆಸುತ್ತಿದ್ದಳೆಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ತನ್ನ ಮೊದಲ ಪತಿಗೆ ಜನಿಸಿದ ಬಾಲಕಿಯನ್ನು ಎರಡು ವರ್ಷ ಮೊದಲೇ ದೇಹವ್ಯಾಪಾರಕ್ಕೆ ನಿರ್ಬಂಧಿಸಿದ್ದಳು ಎನ್ನಲಾಗಿದೆ. ಪುತ್ರಿಯನ್ನು ಮಾರಲು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ತಾನುಳಿದುಕೊಂಡಿದ್ದ ಹೋಟೆಲ್‌ಗೆ ಕರೆಯಿಸಿಕೊಂಡು ಮಹಿಳೆ 4.25 ಲಕ್ಷ ರೂಪಾಯಿಗೆ ಮಾರಾಟ ಕುದುರಿಸಿದ್ದಳು. ಮಹಿಳೆ ಅವರಲ್ಲಿ ಮುಂಗಡ 50,000 ರೂಪಾಯಿ ಬೇಡಿಕೆಯಿಟ್ಟಿದ್ದಳು. ಮಹಿಳೆ ಮುಂಗಡ ಹಣವನ್ನು ಪಡೆದುಕೊಂಡ ಕೂಡಲೇ ಆಕೆಯ ನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಸೆಕ್ಷನ್ 370,372,366 ಪ್ರಕಾರ ಹಾಗೂ ಪಿಐಟಿಎ.ಆಕ್ಟ್‌ನ ನಾಲ್ಕು, ಐದು ಸೆಕ್ಷನ್ ಪ್ರಕಾರವೂ ಮಹಿಳೆಯ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಥಾಣೆ ಪೊಲೀಸ್ ಇನ್ಸ್ಪೆಕ್ಟರ್ ರವೀಂದರ್ ಡೌಂಡ್ಕರ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News