×
Ad

ನಲುವತ್ತು ಚೂರಿ ನುಂಗಿದ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್ !

Update: 2016-08-21 12:46 IST

ಅಮೃತಸರ, ಆ.21: ಪಂಜಾಬ್‌ನ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್ ಒಬ್ಬರು ನುಂಗಿದ್ದ ನಲುವತ್ತು ಚಾಕುಗಳನ್ನು ವೈದ್ಯರು  ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೃತಸರ ಕಾರ್ಪೊರೇಟ್‌ ಹಾಸ್ಪಿಟಲ್‌ ನ ಆಡಳಿತ ನಿರ್ದೇಶಕಾರದ ಡಾ.ಜಿತೇಂದ್ರ ಮಲ್ಹೊತ್ರಾ ,ತಜ್ಞವೈದ್ಯರಾದ ಡಾ.ಬಿ.ಬಿ. ಗೋಯಲ್‌, ಡಾ.ರಾಜೇಂದ್ರ ರಾಜನ್‌, ಡಾ. ಅರ್ತಿ ಮಲ್ಹೊತ್ರಾ ಅವರ ನೇತೃತ್ವದ ತಂಡ ಜರ್ನೈಲ್‌ ಸಿಂಗ್‌ (ಹೆಸರು ಬದಲಿಸಲಾಗಿದೆ) ನುಂಗಿದ್ದ ಚಾಕುಗಳನ್ನು ಹೊರತೆಗೆದಿದ್ದಾರೆ.
ನಲುವತ್ತರ ಹರೆಯದ ಜರ್ನೈಲ್‌ ಸಿಂಗ್‌ ಹೊಟ್ಟೆ ನೋವು ಮತ್ತು ನಿಶಕ್ತಿಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಸ್ಕ್ಯಾನ್‌ ನಡೆಸಿದಾಗ ಜರ್ನೈಲ್‌ ಸಿಂಗ್‌ ಹೊಟ್ಟೆಯಲ್ಲಿ ಚಾಕುಗಳು ತುಂಬಿಕೊಂಡಿರುವುದು ಪತ್ತೆಯಾಗಿತ್ತು.
ಈ ಬಗ್ಗೆ ಜರ್ನೈಲ್‌ ಸಿಂಗ್‌ನನ್ನು ಪ್ರಶ್ನಿಸಿದಾಗ ಕಳೆದು ಎರಡು ತಿಂಗಳಿನಿಂದ ಚಾಕು ನುಂಗುವ ಚಟವನ್ನು ಬೆಳೆಸಿಕೊಂಡಿರುವುದಾಗಿ ಹೇಳಿದ್ದಾನೆ.ಆತನಿಗಿರುವ ಮಾನಸಿಕ ಕಾಯಿಲೆಯು ಚಾಕುಗಳನ್ನು ನುಂಗುವಂತೆ ಮಾಡಿದೆ. 
ಜರ್ನೈಲ್‌ ಸಿಂಗ್‌ ಹೊಟ್ಟೆಯಲ್ಲಿದ್ದ ಚಾಕುಗಳನ್ನು ಹೊರತೆಗೆದ ಬಳಿಕ ಚೇತರಿಸಿಕೊಳ್ಳುತ್ತಿದ್ದಾನೆ. ಇನ್ನು ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News