ಅರ್ಧ್ ಸತ್ಯ ಒಂದು ನೆನಪು

Update: 2016-08-21 07:36 GMT

1980ರ ದಶಕದಲ್ಲಿ ಹಿಂದಿ ಸಿನೆಮಾ ವೈರುದ್ಯಗಳ ರಂಗಭೂಮಿಯಾಗಿತ್ತು. ಗ್ಲಿಟ್ಸಿ ಬಿಗ್ ಟಿಕೆಟ್ ಮೂವಿ ಇಂದಿಗೂ ರಾಜ. ಆದರೆ ಕಳೆದ ದಶಕಗಳ ಜತೆ ಬೇರು ಹೊಂದಿರುವ ಪರ್ಯಾಯ ಸಿನೆಮಾಗಳಿಗೆ ಅದರದ್ದೇ ಪ್ರೇಕ್ಷಕ ವರ್ಗವಿದೆ. ಈ ಎರಡೂ ಸಿದ್ಧಾಂತಗಳು ಪರಸ್ಪರ ಎಲ್ಲೂ ಸಂಧಿಸಲೇ ಇಲ್ಲ. ಒಂದು ಚಿತ್ರ ಬಂದು ಈ ತಡೆಯನ್ನು ಒಡೆಯುವವರೆಗೂ ಎರಡೂ ತಮ್ಮ ಚಿಪ್ಪಿನಲ್ಲಿ ಭದ್ರವಾಗಿಯೇ ಉಳಿಯುತ್ತವೆ.

33 ವರ್ಷಗಳ ಹಿಂದೆ ಇದೇ ತಿಂಗಳು ಬಿಡುಗಡೆಯಾದ ‘‘‘‘ಅರ್ಧ್ ಸತ್ಯ’’’’, ಯಾವುದೇ ಮಾನದಂಡದಿಂದ ಅಳೆದರೂ ಅತ್ಯದ್ಭುತ ಚಿತ್ರ. ಇದರ ಸಿನಿಮೀಯ ಶ್ರೇಷ್ಠತೆ ಪ್ರಶ್ನಾತೀತ. ಅಂತೆಯೇ ಒಂದು ಕಲಾತ್ಮಕ ಚಿತ್ರಕ್ಕೆ ಅಂಥ ಅಭೂತಪೂರ್ವ ಜನಪ್ರಿಯತೆ ದೊರಕಿದ ನಿದರ್ಶನ ಇಲ್ಲ. ಹಲವು ಅರ್ಥಗಳಲ್ಲಿ ‘‘ಮುಖ್ಯವಾಹಿನಿ’’ ಸಿನೆಮಾದ ಕಣ್ಣು ತೆರೆಸಿದ ಮೊಟ್ಟಮೊದಲ ಪರ್ಯಾಯ ಚಿತ್ರ ಇದು. ಚಿತ್ರದ ಚಿತ್ರೀಕರಣ ಸ್ಥಳ, ಸಂಭಾಷಣೆ, ಖಳನಾಯಕನಾದ ರಾಜಕಾರಣಿ, ನಗರದ ಜನನಿಬಿಡ ರಸ್ತೆಗಳಲ್ಲಿ ಚೇಸಿಂಗ್ ದೃಶ್ಯ ಹೀಗೆ ‘‘ಅರ್ಧ್ ಸತ್ಯ’’ ಆರಂಭಿಸಿದ ಪರಂಪರೆ 80ರ ದಶಕದ ‘‘ಮುಖ್ಯವಾಹಿನಿ’’ ಸಿನೆಮಾಗಳಿಗೂ ಮಾದರಿಯಾಯಿತು.

ವಿಸ್ತೃತ ಅರ್ಥದಲ್ಲಿ ಕ್ರಾಂತಿಕಾರಿ ಮನೋಭಾವ ಪೊಲೀಸ್ ಪೇದೆಯೊಬ್ಬ ಸಿನಿಕತನದ ವ್ಯವಸ್ಥೆ ವಿರುದ್ಧ ಹೋರಾಡುವುದು ‘‘ಅರ್ಧ್ ಸತ್ಯ’’ ಚಿತ್ರದ ಕಥಾವಸ್ತು. ದಶಕದ ಹಿಂದೆ ಅಮಿತಾಬ್ ಬಚ್ಚನ್ ಮುಖ್ಯಪಾತ್ರದಲ್ಲಿ ನಟಿಸಿ ಬಿಡುಗಡೆಯಾಗಿದ್ದ ಸ್ಮಾಷ್ ಹಿಟ್ ‘‘ಝಂಜೀರ್’’ ಕಥಾವಸ್ತುವಿಗೆ ಅನುರೂಪವಾದದ್ದು. ಆದರೆ ಹಲವು ಸೂಕ್ಷ್ಮತೆಗಳಲ್ಲಿ ಇದು ಆ ಚಿತ್ರಕ್ಕಿಂತ ಸಂಪೂರ್ಣ ಭಿನ್ನ. ಸಲೀಂ- ಜಾವೇದ್ ಅವರ ‘‘ಝಂಜೀರ್’’ ಚಿತ್ರದ ಸಂಭಾಷಣೆ ತೀರಾ ಮಾಮೂಲಿ ದ್ವೇಷದ ಕಥೆ. ಆದರೆ ವಿಜಯ ತೆಂಡೂಲ್ಕರ್ ಅವರ ಚಿತ್ರಕಥೆ ಹೆಚ್ಚು ರಾಜಕೀಯ ಹಾಗೂ ಮನಃಶಾಸ್ತ್ರೀಯ. ಕ್ರೌರ್ಯಕ್ಕೆ ಹೆಸರಾದ ಪೊಲೀಸ್ ತಂದೆ ಹಾಗೂ ತನ್ನ ಇಚ್ಛೆಗೆ ವಿರುದ್ಧವಾಗಿ ತಳ್ಳಲ್ಪಟ್ಟ ಪೊಲೀಸ್ ವೃತ್ತಿಯ ಮನೋಸ್ಥಿತಿಯನ್ನು ಬಿಂಬಿಸುವಂಥದ್ದು. ಝಂಜೀರ್‌ನ ಹೀರೊ ಅಮಿತಾಬ್ ಬಚ್ಚನ್ ಮಾಮೂಲಿ ಹೀರೊ. ಹತಾಶೆಯಿಂದ ಮದ್ಯಪಾನ ಮಾಡಿ ವಿಚಾರಣಾಧೀನ ಕೈದಿಯೊಬ್ಬನನ್ನು ಸಾಯುವಂತೆ ಥಳಿಸುವ ಓಂಪುರಿ ಮಾತ್ರ ತೀರಾ ವಾಸ್ತವಿಕ. ಕೊನೆಗೆ ತನ್ನನ್ನು ರಕ್ಷಿಸಿಕೊಳ್ಳಲು ಅದೇ ಭ್ರಷ್ಟ ವ್ಯವಸ್ಥೆಯ ಮೊರೆಹೋಗುತ್ತಾನೆ.

 ಗೋವಿಂದ ನಿಹಲಾನಿಯ ಈ ಚಿತ್ರದಂತೆ ಯಾವುದೂ ‘ಮುಖ್ಯವಾಹಿನಿ’ ಸಿನೆಮಾಗೆ ಸಡ್ಡುಹೊಡೆಯಲಿಲ್ಲ. ಚಿತ್ರ ನಿರ್ಮಾಪಕರು ಮತ್ತು ಚಿತ್ರಕಥೆ ಬರೆಯುವವರು ಪೊಲೀಸ್ ಅಧಿಕಾರಿಗಳನ್ನು ಹಾಗೂ ಭೂಗತ ಕಿಂಗ್‌ಪಿನ್‌ಗಳನ್ನು ಚಿತ್ರಿಸಿದ್ದರೂ, ಈ ಚಿತ್ರದಲ್ಲಿನ ಚಿತ್ರಣ ಎಲ್ಲೂ ಸಿಗುವುದಿಲ್ಲ. ಅಮಿತಾಬ್ ಬಚ್ಚನ್ ಅವರ ‘ದೀವಾರ್’ ಚಿತ್ರದ ಹಾಜಿ ಮಸ್ತಾನ್ ಪಾತ್ರ, ‘ಧರ್ಮಾತ್ಮ’ ಚಿತ್ರದಲ್ಲಿ ಪ್ರೇಮನಾಥ್ ಅವರ ಗಾಡ್‌ಫಾದರ್ ಪಾತ್ರ, ‘ಝಂಜೀರ್’ ಚಿತ್ರದಲ್ಲಿ ಪ್ರಾಣ್ ಅವರ ಶೇರ್ ಖಾನ್ ಪಾತ್ರ ಎಲ್ಲವೂ ಕರೀಂಲಾಲಾ ಪಾತ್ರದಿಂದ ಸ್ಫೂರ್ತಿ ಪಡೆದಂಥವು. ಆದರೆ ಈ ಯಾವ ಪಾತ್ರಗಳೂ, ವಾಸ್ತವಿಕ ವಿಚಾರಕ್ಕೆ ಬಂದರೆ ಸದಾಶಿವ ಅಮ್ರಾಪುರಕರ್ ಅವರ ರಾಮ ಶೆಟ್ಟಿ ಪಾತ್ರಕ್ಕೆ ಸರಿಸಾಟಿಯಲ್ಲ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಹೇಳಿ ಮಾಡಿಸಿದಂಥ ನಟ.

 ಅಧಿಕಾರಯುತವಾಗಿ ‘‘ಅರ್ಧ್ ಸತ್ಯ’’ದ ಪಾತ್ರಗಳು, ಅವು ಎಲ್ಲಿ ನಿರ್ಗಮಿಸಿವೆಯೋ ಅಲ್ಲಿಂದಲೇ ರೂಪುಗೊಳ್ಳುವುದು ವಿಶೇಷ. ವಾಣಿಜ್ಯ ಚಿತ್ರಗಳಂತೆ ರಾಮಶೆಟ್ಟಿ ಇಲ್ಲಿ ಶೂನ್ಯದಿಂದ ಖಳನಾಯಕನಾಗುವುದಿಲ್ಲ. ಭ್ರಷ್ಟ ರಾಜಕೀಯ ವ್ಯವಸ್ಥೆಯ ಚಕ್ರದಲ್ಲಿ ಸಿಕ್ಕಿಕೊಂಡ ವಸ್ತು. ‘ತ್ರಿಶೂಲ್’ ಚಿತ್ರದಲ್ಲಿನ ಅಮಿತಾಬ್ ಬಚ್ಚನ್ ಪಾತ್ರವನ್ನು ನೆನಪಿಸಿಕೊಂಡರೆ, ಆ್ಯಂಬುಲೆನ್ಸ್ ವಾಹನವನ್ನು ಒತ್ತುವರಿ ಮಾಡಿಕೊಂಡ ಜಾಗದತ್ತ ಚಾಲನೆ ಮಾಡಿಕೊಂಡು ಬಂದು, ಸ್ಲಂಲಾರ್ಡ್‌ನನ್ನು ಆಸ್ಪತ್ರೆಗೆ ಕಳುಹಿಸುವಲ್ಲಿ ಯಾವ ಪರಿಣಾಮವೂ ಕಾಣುವುದಿಲ್ಲ. ಆದರೆ ‘‘ಅರ್ಧ್ ಸತ್ಯ’’ ಇಂಥ ವಿಶಿಷ್ಟ ಚಿತ್ರವಾಗಲು ಕಾರಣ ಅದು ಸಂಪರ್ಕ ಕೊಂಡಿಗಳನ್ನು ಪ್ರತಿ ಹಂತದಲ್ಲೂ ಸೃಷ್ಟಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಾನೂನುಬಾಹಿರ ಕೃತ್ಯಕ್ಕೆ ಕಟ್ಟಿಹಾಕುವ ಅದೃಶ್ಯ ಹಗ್ಗದ ಮೇಲೆ ಬೆಳಕು ಬೀರುತ್ತದೆ.

 ಇಂಥ ವಾಸ್ತವಿಕತೆ ವಿಜಯ್ ತೆಂಡೂಲ್ಕರ್ ಅವರ ವಿಶೇಷತೆ. ಇದೇ ವೇಳೆ ಈ ಮುತ್ಸದ್ಧಿ ಚಿತ್ರ ಸಂಭಾಷಣೆಕಾರ, ಮನುಷ್ಯ ಸಹಜ ಯೋಚನೆಯ ಇನ್ನೊಂದು ಮಹತ್ವದ ವಾಸ್ತವದ ದೃಷ್ಟಿಕೋನವನ್ನೂ ಗ್ರಹಿಸಿದ್ದಾರೆ. ಅವರು ದಶಕದ ಹಿಂದೆ ನೆಹರೂ ಫೆಲೋಶಿಫ್‌ನಡಿ, ಹಿಂಸೆಯ ಬಗ್ಗೆ ನಡೆಸಿದ್ದ ಅಧ್ಯಯನ ಕೂಡಾ ಇಲ್ಲಿ ಅವರ ಗಟ್ಟಿ ಕಥಾವಸ್ತುವಿಗೆ ಪೂರಕವಾಗಿದೆ. ಗೋವಿಂದ್ ನಿಹಲಾನಿ ಹೇಳುವಂತೆ, ‘‘ಅರ್ಧ್ ಸತ್ಯ’’ ಚಿತ್ರದಲ್ಲಿ, ಒಂದು ಸೇವೆ ಸಲ್ಲಿಸುವ ವ್ಯವಸ್ಥೆಯು ಒಬ್ಬನ ಮನೋಭಾವಕ್ಕೆ ಧಕ್ಕೆ ತರುತ್ತದೆ. ಅನಂತ್ ವೆಳಂಕರ್ ಬಲವಾಗಿ ನಂಬುವಂತೆ ಅವರು ಇತರ ಮಾಮೂಲಿ ಕ್ರೌರ್ಯದ ಪೊಲೀಸರಿಗಿಂತ ಭಿನ್ನ. ಅಂತಿಮವಾಗಿ ಆತ ತಮ್ಮ ವೃತ್ತಿಯ ಕ್ರೌರ್ಯದ ಬಲೆಗೆ ಬೀಳುತ್ತಾನೆ. ಇಲ್ಲಿ ತೆಂಡೂಲ್ಕರ್ ಅವರ ಚಿತ್ರಕಥೆ ಎಸ್.ಟಿ.ಪನವಾಲ್ಕರ್ ಅವರ ಸಣ್ಣಕಥೆ ಸೂರ್ಯದ ವಿಸ್ತೃತ ರೂಪ. ಇದು ತಂದೆ- ಮಗನ ಸಂಘರ್ಷದ ಕಥಾವಸ್ತುವನ್ನು ಹೊಂದಿತ್ತು. ಆ ಹಂದರವನ್ನಷ್ಟೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿಹಲಾನಿ ಸ್ಪಷ್ಟಪಡಿಸುತ್ತಾರೆ. ಇದು ಕೇವಲ ರಾಜಕೀಯ ವಾಸ್ತವತೆ ದೃಷ್ಟಿಯಿಂದ ಮಾತ್ರ ಪ್ರಮುಖ ಚಿತ್ರವಾಗಿರದೇ ಅದರ ಗೂಢಾರ್ಥದಲ್ಲಿ ಕೂಡ. ನಾಯಕ ಬೇರೆಯವರ ಜತೆ ಸಂಘರ್ಷಕ್ಕೆ ಇಳಿಯದೇ ತನ್ನಲ್ಲೇ ಆಂತರಿಕ ಸಂಘರ್ಷದ ಪರಿಸ್ಥಿತಿ ಎದುರಿಸುವುದನ್ನು ಬಿಂಬಿಸಿದ ಮೊದಲ ಚಿತ್ರ. ಕಥಾವಸ್ತು ಇರುವುದು ಕೇವಲ ಕಥೆ ಅಥವಾ ಚಿತ್ರಕಥೆಯಲ್ಲಿ ಮಾತ್ರವಲ್ಲ; ಪಾತ್ರದಲ್ಲಿ ಎನ್ನುವುದನ್ನು ನಿರೂಪಿಸಿದ ಮೊಟ್ಟಮೊದಲ ಚಿತ್ರಲೇಖಕ ತೆಂಡೂಲ್ಕರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News