×
Ad

ಬಜೆಟ್ ಮಂಡನೆಯಲ್ಲಿ ಹಲವು ಬದಲಾವಣೆ?

Update: 2016-08-22 23:33 IST

ಹೊಸದಿಲ್ಲಿ, ಆ.22: ಕೇಂದ್ರ ಬಜೆಟ್ ಮಂಡನೆಯಲ್ಲಿ ಹಲವು ಬದಲಾವಣೆಗೆ ಸರಕಾರ ಮುಂದಾಗಿದೆ. ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡಿಸಲು ಬ್ರಿಟಿಷ್ ಸಂಪ್ರದಾಯಕ್ಕೆ ಗುಡ್‌ಬೈ ಹೇಳಿ ತಿಂಗಳ ಮೊದಲೇ ಬಜೆಟ್ ಮಂಡಿಸಲು ಯೋಚಿಸುತ್ತಿದೆ.


ಈ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲವಾದರೂ ಮಾರ್ಚ್ 31ರೊಳಗಾಗಿ ಎಲ್ಲ ಬಜೆಟ್ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ಯೋಚಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇದರಿಂದ ನೀತಿಗಳ ಜಾರಿ ಕ್ಷಿಪ್ರವಾಗುತ್ತದೆ ಹಾಗೂ ಹೊಸ ಹಣಕಾಸು ವರ್ಷದ ಆರಂಭದಿಂದಲೇ ಇಲಾಖೆಗಳು ತಮ್ಮ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈಗ ವಾಸ್ತವವಾಗಿ ಹಣ ಇಲಾಖೆಗಳಿಗೆ ಹಂಚಿಕೆಯಾಗುವುದು ಮೇ ತಿಂಗಳ ಕೊನೆಯ ವೇಳೆಗೆ. ಬಜೆಟ್ ಮಂಡನೆ ದಿನಾಂಕ ನಿರ್ಧರಿಸಿಲ್ಲ. ಆದರೆ ಗಣರಾಜ್ಯೋತ್ಸವ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಜನವರಿ ಕೊನೆಯ ವೇಳೆಗೆ ಮಂಡಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News