ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರದಿಂದ 'ಹತ್ತು ದಿನಗಳಲ್ಲಿ ಶುಭ ಸುದ್ದಿ'!

Update: 2016-08-25 03:08 GMT

ಹೊಸದಿಲ್ಲಿ, ಆ.25: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ 'ಹತ್ತು ದಿನಗಳಲ್ಲಿ ಶುಭ ಸುದ್ದಿ' ನೀಡಲಿದೆ. ಅದೇನು ಗೊತ್ತೇ? ಭಾರತದ ವಾಯುಪ್ರದೇಶದಲ್ಲಿ ಹಾರಾಟದಲ್ಲಿರುವ ವೇಳೆ ವಿಮಾನ ಪ್ರಯಾಣಿಕರು ವಿಮಾನದೊಳಗೆ ವೈ-ಫೈ ಬಳಸಲು ಅವಕಾಶ ಮಾಡಿಕೊಡಲಿದೆ. ಈ ಬಗ್ಗೆ ನಿರ್ಧಾರ ಕೆಲ ದಿನಗಳಲ್ಲಿ ಪ್ರಕಟವಾಗಲಿದೆ ಎಂಬ ಸುಳಿವು ನೀಡಿದೆ.
"ಹತ್ತು ದಿನಗಳಲ್ಲಿ ಶುಭ ಸುದ್ದಿ ನೀಡಲು ಸಾಧ್ಯವಾಗಬಹುದು" ಎಂಬ ವಿಶ್ವಾಸವನ್ನು ಕೇಂದ್ರ ವಿಮಾನಯಾನ ಖಾತೆ ಕಾರ್ಯದರ್ಶಿ ಆರ್.ಎನ್.ಚೌಧರಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿಮಾನಯಾನಿಗಳು ಭಾರತೀಯ ವಾಯುಪ್ರದೇಶದಲ್ಲಿ ಮೊಬೈಲ್ ಅಥವಾ ಇಂಟರ್‌ನೆಟ್ ಬಳಸಲು ಅವಕಾಶ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News