×
Ad

ಸ್ಮೃತಿ ಇರಾನಿಯ ಏರ್ ಜೆಟ್‌ವೇಸ್ ನಂಟು?

Update: 2016-08-25 08:46 IST

ಹೊಸದಿಲ್ಲಿ, ಆ.25: "ಜೆಟ್ ಏರ್‌ವೇಸ್‌ನಲ್ಲಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ನಾನು ಸಲ್ಲಿಸಿದ್ದ ಅರ್ಜಿಯನ್ನು ನನ್ನ ಮೈಕಟ್ಟು ಆಕರ್ಷಕವಾಗಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು" ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಬಹಿರಂಗಪಡಿಸಿದ್ದಾರೆ.
"ಅರ್ಜಿ ತಿರಸ್ಕಾರವಾದದ್ದು ಒಳ್ಳೆಯದೇ ಆಯಿತು. ನನಗೆ ಮೆಕ್ ಡೊನಾಲ್ಡ್ಸ್‌ನಲ್ಲಿ ಉದ್ಯೋಗ ಸಿಕ್ಕಿತು. "ಉಳಿದೆಲ್ಲವೂ ಇತಿಹಾಸ" ಎಂದು ಕಿರುತೆರೆಯಿಂದ ರಾಜಕಾರಣಿಯಾಗಿ ರೂಪುಗೊಂಡ ಇರಾನಿ ಹೇಳಿದ್ದಾರೆ.
"ನಾನು ಜೆಟ್ ಏರ್‌ವೇಸ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಲು ಆಕಾಂಕ್ಷೆ ಹೊಂದಿದ್ದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ನಾನು ನೋಡಲು ಆಕರ್ಷಕವಾಗಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು. ಅರ್ಜಿ ತಿರಸ್ಕಾರವಾದದ್ದು ಒಳ್ಳೆಯದೇ ಆಯಿತು. ನನಗೆ ಮೆಕ್ ಡೊನಾಲ್ಡ್ಸ್‌ನಲ್ಲಿ ಉದ್ಯೋಗ ಸಿಕ್ಕಿತು" ಎಂದು ತಿಳಿಸಿದ್ದಾರೆ.
ವಾಯು ಪ್ರಯಾಣಿಕರ ಸಂಘ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಜವಳಿ ಖಾತೆ ಸಚಿವೆ, ಪ್ರಯಾಣಿಕಳಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು. ಜೆಟ್ ಏರ್‌ವೇಸ್ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುವಾಗ ಈ ವಿಷಯವನ್ನು ಬಹಿರಂಗಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News