ಬೀದಿ ನಾಯಿಗಳನ್ನು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ

Update: 2016-08-26 12:00 GMT

ತಿರುವನಂತಪುರಂ,ಆಗಸ್ಟ್ 26: ಬೀದಿನಾಯಿಗಳ ವಿಚಾರದಲ್ಲಿ ಕೇರಳಸರಕಾರವನ್ನು ತರಾಟೆಗೆತ್ತಿಕೊಂಡ ಕೇಂದ್ರ ಸಚಿವೆ ಮೇನಕಾ ಗಾಂಧಿಗೆ ಕೇರಳ ಸ್ಥಳೀಯಾಡಳಿತ ಸಚಿವ ಕೆ.ಟಿ. ಜಲೀಲ್ ಖಾರವಾದ ಉತ್ತರವನ್ನು ನೀಡಿದ್ದಾರೆ.ಅಪಾಯಕಾರಿ ನಾಯಿಗಳನ್ನು ನಿವಾರಿಸಲಾಗುವುದು ಎಂದು ಸಚಿವ ಜಲೀಲ್ ಹೇಳಿದ್ದಾರೆ. ಕೇಂದ್ರದೊಂದಿಗೆ ಘರ್ಷಣೆಗೆ ನಾವಿಲ್ಲ. ಆದರೆ ಬೀದಿನಾಯಿಗಳನ್ನು ಕೊಲ್ಲುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲ. ಮಾನವರಲ್ಲಿ ಪ್ರೀತಿಯಿಲ್ಲದವರು ಹೇಗೆ ಪ್ರಾಣಿಗಳನ್ನು ಪ್ರೀತಿಸುತ್ತಾರೆ ಎಂದು ಜಲೀಲ್ ಪ್ರಶ್ನಿಸಿದ್ದಾರೆಂದು ವರದಿಯಾಗಿದೆ.

ಕೇರಳ ಸರಕಾರ ಬೇಜವಾಬ್ದಾರಿಕೆಯಿಂದ ವರ್ತಿಸುತ್ತಿದೆ. ತನ್ನನ್ನು ಅದು ಭಯೋತ್ಪಾದಕಿಯಂತೆ ಚಿತ್ರಿಸಿ ಪಾರಾಗಲು ನೋಡುತ್ತಿದೆ ಎಂದು ಮೇನಕಾ ಗಾಂಧಿ ಬೀದಿನಾಯಿಗಳನ್ನು ಕೊಲ್ಲುವ ಕೇರಳ ಸರಕಾರದ ನಿರ್ಧಾರವನ್ನು ಪ್ರಸ್ತಾಪಿಸಿ ಈ ಹಿಂದೆ ಆರೋಪಿಸಿದ್ದರು. ನಾಯಿಗಳನ್ನು ಕೊಲ್ಲುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಮೇನಕಾ ಗಾಂಧಿ ಸೂಚಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News