×
Ad

ಸ್ಕಾರ್ಪಿನ್ ದಾಖಲೆ ಸೋರಿಕೆ ಕಳವಳದ ವಿಷಯವಲ್ಲ: ಪಾರಿಕ್ಕರ್

Update: 2016-08-26 20:16 IST

ಹೊಸದಿಲ್ಲಿ, ಆ.26: ಸ್ಕಾರ್ಪಿನ್ ಜಲಾಂತರ್ಗಾಮಿಯ ದಾಖಲೆ ಸೋರಿಕೆ ‘ದೊಡ್ಡ ಚಿಂತೆಯ ವಿಷಯವೇನಲ್ಲ’ವೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಶುಕ್ರವಾರ ಹೇಳಿದ್ದಾರೆ.

‘ದಿ ಆಸ್ಟ್ರೇಲಿಯನ್’ ವಾರ್ತಾ ಪತ್ರಿಕೆಯ ವೆಬ್‌ನಲ್ಲಿ ಪ್ರಕಟಿಸಲಾಗಿರುವ ಸೋರಿಕೆ ದಾಖಲೆಗಳು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಸೋರಿಕೆಯಾಗಿರುವ ಹೆಚ್ಚಿನ ದಾಖಲೆಗಳು ಕಳವಳಪಡಬೇಕಾದಂತಹವುಗಳಲ್ಲವೆಂದು ನೌಕಾಪಡೆ ತನಗೆ ಭರವಸೆ ನೀಡಿದೆಯೆಂದು ಅವರು ತಿಳಿಸಿದ್ದಾರೆ.

ಸ್ಕಾರ್ಪಿನಿ ಜಲಾಂತರ್ಗಾಮಿ ಸಮುದ್ರದಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನೂ ಸಂಪೂರ್ಣವಾಗಿ ಮುಗಿಸಿಲ್ಲ. ಅದು ನೀರಿನೊಳಗೆ ಹೇಗೆ ಕೆಲಸ ಮಾಡುತ್ತದೆಂದು ತಿಳಿಯಲು ಈ ಪರೀಕ್ಷೆ ಅಗತ್ಯವೆಂದು ಪಾರಿಕ್ಕರ್ ಹೇಳಿದ್ದಾರೆ.

ಭಾರತೀಯ ನೌಕಾ ಪಡೆಯು ಸ್ಕಾರ್ಪಿನ್ ದಾಖಲೆ ಸೋರಿಕೆಯ ವಿಚಾರವನ್ನು ಫ್ರಾನ್ಸ್‌ನ ಶಸ್ತ್ರಾಸ್ತ್ರ ಮಹಾ ನಿರ್ದೇಶನಾಲಯಕ್ಕೆ ಒಯ್ದಿದೆ. ತಾವು ವರದಿಗಾಗಿ ಕಾಯುತ್ತಿದ್ದೇವೆ. ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಮೂಲಭೂತವಾಗಿ ಕಳವಳದ ವಿಚಾರವಲ್ಲ. ಆದರೆ ಅದು ಸೋರಿಕೆಯಾಗಿದೆಯೆಂದು ತಾವೇ ಭಾವಿಸಿಕೊಂಡು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News